ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ನೇಮಕಾತಿ 2026: 86 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ನೇಮಕಾತಿ 2026: ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶದ ಮಾಹಿತಿ ಹೊಸ ನೇಮಕಾತಿ ಬಿಡುಗಡೆ ಆಗಿದೆ. ನೀಡಿರುವ ನೇಮಕಾತಿ ವಿವರಗಳ ಪ್ರಕಾರ, ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದಲ್ಲಿ ಟೈಪಿಸ್ಟ್, ಟೈಪಿಸ್ಟ್-ಕಾಪಿಸ್ಟ್, ಪ್ರೊಸೆಸ್ ಸರ್ವರ್ ಮತ್ತು ಪ್ಯೂನ್ ಸೇರಿದಂತೆ ಒಟ್ಟು 86 ಹುದ್ದೆ ಗಳಿಗೆ ನೇಮಕಾತಿ ಓಪನ್ ಆಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ ಹಾಗೂ ಪ್ರಮುಖ ದಿನಾಂಕಗಳ ಮಾಹಿತಿಯನ್ನು ಪರಿಶೀಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ನೋಡಿ ನಂತರವೇ ಅಪ್ಲಿಕೇಶನ್ ಹಾಕಿ.

ಹುದ್ದೆಗಳ ವಿವರ – Bengaluru Rural Court Vacancy 2026

ಹುದ್ದೆಯ ಹೆಸರು| ಹುದ್ದೆಗಳ ಸಂಖ್ಯೆ

  • ಟೈಪಿಸ್ಟ್ (Typist)| 8
  • ಟೈಪಿಸ್ಟ್-ಕಾಪಿಸ್ಟ್ (Typist-Copyist)| 18
  • ಪ್ರೊಸೆಸ್ ಸರ್ವರ್ (Process Server)| 24
  • ಪ್ಯೂನ್ (Peon)| 36
  • ಒಟ್ಟು ಹುದ್ದೆಗಳು| 86

ಶೈಕ್ಷಣಿಕ ಮಾಹಿತಿ :

ನೀಡಿರುವ ಮಾಹಿತಿಯ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10th , 12ನೇ ತರಗತಿ / PUC ಅಥವಾ ಸಂಬಂಧಿತ ಡಿಪ್ಲೊಮಾ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಆದರೆ ಪ್ರತಿ ಹುದ್ದೆಗೆ ಪ್ರತ್ಯೇಕ ಶೈಕ್ಷಣಿಕ ಅರ್ಹತೆ, ಟೈಪಿಂಗ್ ಅರ್ಹತೆ ಅಥವಾ ಇತರ ಷರತ್ತುಗಳು ಅನ್ವಯಿಸಬಹುದು. ಆದ್ದರಿಂದ ಅಭ್ಯರ್ಥಿಗಳು ಅಧಿಕೃತ ನೇಮಕಾತಿ ಅಧಿಸೂಚನೆಯಲ್ಲಿ ನೀಡಿರುವ ಅರ್ಹತೆಯನ್ನು ನೋಡಿ ಅಪ್ಲಿಕೇಶನ್ ಹಾಕಿ ಹುದ್ದೆಗಳ ಅನುಸಾರ ವಿದ್ಯಾಭ್ಯಾಸ ಬೇಕಾಗುತ್ತದೆ.

ವಯೋಮಿತಿ : 

ಕನಿಷ್ಠ ವಯಸ್ಸು: 18 ವರ್ಷ. ಗರಿಷ್ಠ ವಯಸ್ಸು: ನೀಡಿರುವ ಮಾಹಿತಿಯ ಪ್ರಕಾರ, ಗರಿಷ್ಠ ವಯಸ್ಸು 40 ವರ್ಷಗಳವರೆಗೆ ಇದೆ.

ವಯೋಮಿತಿಯ ರಿಯಾಯಿತಿ ಮಾಹಿತಿ :

  • Cat-2A, Cat-2B, Cat-3A ಮತ್ತು Cat-3B ಅಭ್ಯರ್ಥಿಗಳಿಗೆ: 3 ವರ್ಷ.
  • – SC, ST ಮತ್ತು Cat-I ಅಭ್ಯರ್ಥಿಗಳಿಗೆ: 5 ವರ್ಷ.

ವಯೋಮಿತಿ ಲೆಕ್ಕಾಚಾರದ ದಿನಾಂಕ ಹಾಗೂ ಒಂದು ಬಾರಿಯ ಸಡಿಲಿಕೆಯ ನಿಯಮಗಳು ಅಧಿಕೃತ ಅಧಿಸೂಚನೆಯ ಪ್ರಕಾರ ಅನ್ವಯಿಸುತ್ತವೆ. ಅರ್ಜಿ ಸಲ್ಲಿಸುವ ಮೊದಲು ಪರಿಶೀಲಿಸಬೇಕು.

ಅರ್ಜಿ ಶುಲ್ಕದ ವಿವರಗಳ ಮಾಹಿತಿ : 

  •  ಸಾಮಾನ್ಯ ವರ್ಗದ ಅಭ್ಯರ್ಥಿಗಳು: ₹200
  • – Cat-2A, Cat-2B, Cat-3A ಮತ್ತು Cat-3B: ₹100
  • – SC / ST / Cat-I / PwBD ಅಭ್ಯರ್ಥಿಗಳು: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
  • – ಶುಲ್ಕ ಪಾವತಿ ವಿಧಾನ: ಆನ್‌ಲೈನ್ ಮೂಲಕ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

ಆಯ್ಕೆ ವಿಧಾನದ ಮಾಹಿತಿಗಳು : 

ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ನೇಮಕಾತಿಗೆ ಅಭ್ಯರ್ಥಿಗಳನ್ನು ಕೆಳಗಿನ ವಿಧಾನಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. kelavu ಹುದ್ದೆಗಳಿಗೆ ಪರೀಕ್ಷೆ ಇರುವುದಿಲ್ಲ ನೇರ ನೇಮಕಾತಿ ಗಳ ಮೂಲಕ ಮಾಡಲಾಗುತ್ತದೆ.

1. ಕೌಶಲ್ಯ ಪರೀಕ್ಷೆ (Skill Test)

2. ಸಂದರ್ಶನ (Interview)

ಆನ್‌ಲೈನ್ ಅರ್ಜಿ ಸಲ್ಲಿಸುವ ವಿಧಾನಗಳು :

ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.

1. ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ arji ಲಿಂಕ್ ಕೆಳಗೆ ನೀಡಿದ್ದೇವೆ.

2. ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

3. ನಿಮ್ಮ ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿಯನ್ನು ಪರಿಶೀಲಿಸಿ.

4. ಆನ್‌ಲೈನ್ ಅರ್ಜಿ ಲಿಂಕ್ ತೆರೆಯಿರಿ.

5. ಹೆಸರು, ವಿಳಾಸ, ಶೈಕ್ಷಣಿಕ ಅರ್ಹತೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಯಾವುದೇ ತಪ್ಪುಗಳನ್ನು ಮಾಡದೇ ಭರ್ತಿ ಮಾಡಿ.

6. ಅಗತ್ಯ ಪ್ರಮಾಣಪತ್ರಗಳು, ಭಾವಚಿತ್ರ ಮತ್ತು ಸಹಿಯನ್ನು ನಿಗದಿತ ಫೈಲ್ಅ ಅಲ್ಲಿ ಅಪ್ಲೋಡ್ ಮಾಡಿ.

7. ಅನ್ವಯಿಸಿದರೆ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.

8. ಅರ್ಜಿಯಲ್ಲಿರುವ ಎಲ್ಲಾ ವಿವರಗಳನ್ನು ಪರಿಶೀಲಿಸಿ Submit ಬಟನ್ ಕ್ಲಿಕ್ ಮಾಡಿ.

9. ಅರ್ಜಿ ಸಲ್ಲಿಸಿದ ನಂತರ Application Number ಅಥವಾ ಸ್ವೀಕೃತಿ ಪ್ರತಿಯನ್ನು ಉಳಿಸಿಕೊಳ್ಳಿ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು :

– ಆನ್‌ಲೈನ್ ಅರ್ಜಿ ಪ್ರಾರಂಭ: 07 ಅಕ್ಟೋಬರ್ 2026

– ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06 ನವೆಂಬರ್ 2026

ಕರ್ನಾಟಕ ಸರ್ಕಾರಿ ಉದ್ಯೋಗಗಳು, ಜಿಲ್ಲಾ ನ್ಯಾಯಾಲಯ ನೇಮಕಾತಿ, ಹೊಸ ಉದ್ಯೋಗ ಅಧಿಸೂಚನೆಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿಗಾಗಿ dailykannadanews.in ವೆಬ್‌ಸೈಟ್‌ಗೆ ಭೇಟಿ ನೀಡಿ.

Notification PDF Download

Apply Link

By sapalyamanish

With five years of experience in news content writing, Mahesha has a proven track record of delivering high-quality journalism. Having worked with FastNews, Job Updates, and InfoKannada, they specialize in producing timely and insightful articles that engage and inform readers

Related Post

Leave a Reply

Your email address will not be published. Required fields are marked *