ಕರ್ನಾಟಕ ರೇಷನ್ ಕಾರ್ಡ್ e-KYC 2026: ಮೊಬೈಲ್‌ನಲ್ಲಿ ಅನ್ನ ಸೇವೆ App ಮೂಲಕ e-KYC ಮಾಡುವುದು ಹೇಗೆ ಅಂತ ಹೇಳಿ ಕೊಡುತ್ತೇನೆ ಪೂರ್ತಿ ಓದಿ.
ಕರ್ನಾಟಕದ ರೇಷನ್ ಕಾರ್ಡ್ ಫಲಾನುಭವಿಗಳಿಗೆ e-KYC ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮೊಬೈಲ್ ಆ್ಯಪ್ ವ್ಯವಸ್ಥೆಯನ್ನು ಬಿಡುಗಡೆ ಈಗಾಗಲೇ ಮಾಡಲಾಗಿದೆ. ಇದರ ಮೂಲಕ ಅರ್ಹ ಫಲಾನುಭವಿಗಳು ಮೊಬೈಲ್‌ನಲ್ಲೇ Face Authentication ಮೂಲಕ e-KYC ಪೂರ್ಣಗೊಳಿಸಲು ಅವಕಾಶ ನೀಡಲಾಗಿರುತ್ತದೆ.
ಈ ಲೇಖನದಲ್ಲಿ Karnataka Ration Card e-KYC 2026, App ಮೂಲಕ e-KYC ಮಾಡುವುದು ಹೇಗೆ, ಯಾವ Apps ಬೇಕು, ಯಾರಿಗೆ e-KYC ಅಗತ್ಯ ಮತ್ತು e-KYC Status ಪರಿಶೀಲಿಸುವುದು ಹೇಗೆ ಎಂಬ ಪೂರ್ಣ ಮಾಹಿತಿಯನ್ನು ನೋಡೋಡ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಕರ್ನಾಟಕ ರೇಷನ್ ಕಾರ್ಡ್ e-KYC ಎಂದರೇನು?
ರೇಷನ್ ಕಾರ್ಡ್‌ನಲ್ಲಿರುವ ಫಲಾನುಭವಿಯ ಗುರುತನ್ನು ಆಧಾರ್ ಆಧಾರಿತ ದೃಢೀಕರಣದ ಮೂಲಕ ಪರಿಶೀಲಿಸುವ ಪ್ರಕ್ರಿಯೆಯನ್ನು e-KYC ಎಂದು ಹೇಳುತ್ತೇವೆ. ರೇಷನ್ ಕಾರ್ಡ್‌ನಲ್ಲಿರುವ ಅರ್ಹ ಫಲಾನುಭವಿಗಳ ಮಾಹಿತಿಯನ್ನು ಪರಿಶೀಲಿಸಲು e-KYC ಪ್ರಮುಖ ಪ್ರಕ್ರಿಯೆ ಆಗಿರುತ್ತದೆ.
Anna Seva App ಬಗೆಗಿನ ಕೆಲವು ಮಾಹಿತಿಗಳು :
Anna Seva App ಕರ್ನಾಟಕ ಆಹಾರ ಇಲಾಖೆಯ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಸಂಬಂಧಿಸಿದ ಸೇವೆಗಳನ್ನು ಮೊಬೈಲ್ ಮೂಲಕ ಬಳಸಲು ಸಹಾಯ ಮಾಡುವ ಆ್ಯಪ್ ಆಗಿರುತ್ತದೆ
ಈ ಆ್ಯಪ್ ಮೂಲಕ Aadhaar-based Face Authentication ಬಳಸಿ ರೇಷನ್ ಕಾರ್ಡ್ e-KYC ಪ್ರಕ್ರಿಯೆಯನ್ನು ಕೈಗೊಳ್ಳುವ ವ್ಯವಸ್ಥೆ ಗಳನ್ನು ನೀಡಲಾಗಿರುತ್ತದೆ .
ಮೊಬೈಲ್‌ನಲ್ಲಿ Ration Card e-KYC ಮಾಡಬಹುದೇ?
ಹೌದು. ನಿಮ್ಮ ಜಿಲ್ಲೆಯಲ್ಲಿ Anna Seva App ಮೂಲಕ e-KYC ಸೇವೆ ಲಭ್ಯವಿದ್ದರೆ, ಮೊಬೈಲ್‌ನಲ್ಲೇ ರೇಷನ್ ಕಾರ್ಡ್ e-KYC ಮಾಡಲು ಸಾಧ್ಯವಾಗುತ್ತದೆ. ಮೊಬೈಲ್‌ನಲ್ಲಿ e-KYC ಮಾಡಲು ಇಲಾಖೆಯು ಸೂಚಿಸಿರುವ ಅಧಿಕೃತ Apps ಮತ್ತು ಮಾರ್ಗಸೂಚಿಗಳನ್ನು ಮಾತ್ರ ಬಳಸುವುದು ಮುಖ್ಯ.
Anna Seva App ಮೂಲಕ Ration Card e-KYC ಮಾಡುವುದು ಹೇಗೆ ಎಂದು ಹೇಳಿ ಕೊಡುತ್ತೇನೆ ಬನ್ನಿ :
- ಹಂತ 1: ಮೊಬೈಲ್‌ನಲ್ಲಿ Anna Seva App ಡೌನ್ಲೋಡ್ ಮಾಡಿ ಓಪನ್ ಮಾಡಿ 1st.
- ಹಂತ 2: ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ ಮತ್ತು ನಿಮ್ಮ ರೇಷನ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿ.
- ಹಂತ 3: ರೇಷನ್ ಕಾರ್ಡ್‌ನಲ್ಲಿರುವ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಿ.
- ಹಂತ 4: e-KYC ಬಾಕಿ ಇರುವ ಸದಸ್ಯರನ್ನು ಗುರುತಿಸಿ ಟಿಕ್ ಮಾಡಿ.
- ಹಂತ 5: ಮುಂದಿನ ಹಂತದಲ್ಲಿ e-KYC ಅಥವಾ Face Authentication ಆಯ್ಕೆಯನ್ನು ಆಯ್ಕೆ ಮಾಡಿ.
- ಹಂತ 6: ಮೊಬೈಲ್ ಕ್ಯಾಮೆರಾ ಮೂಲಕ Face Authentication ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
- ಹಂತ 7: ಪರಿಶೀಲನೆ ಯಶಸ್ವಿಯಾದ ನಂತರ e-KYC Status ಅನ್ನು ಪರಿಶೀಲಿಸಿ.
ಗಮನಿಸಿ: App version ಮತ್ತು ಇಲಾಖೆಯ ಪ್ರಸ್ತುತ ಮಾರ್ಗಸೂಚಿಯ ಪ್ರಕಾರ ಹಂತಗಳಲ್ಲಿ ಸ್ವಲ್ಪ ಬದಲಾವಣೆ ಇರಬಹುದು ಎಲ್ಲಾ ಮಾಹಿತಿ ನೋಡಿ ಎಂಟರ್ ಮಾಡಿ.
Ration Card e-KYC ಮಾಡಲು ಯಾವ Apps ಬೇಕು?
ಮೊದಲಿಗೆ Anna Seva e-KYC ಪ್ರಕ್ರಿಯೆಯಲ್ಲಿ ಇಲಾಖೆಯು ಸೂಚಿಸಿರುವ ಅಧಿಕೃತ Apps ಅಗತ್ಯವಾಗಬಹುದು.
ಮುಖ್ಯವಾಗಿ:
1. Anna Seva App
2. AadhaarFaceRD App
3. CeG Face KYC ಆಪ್
ಆಪ್ ಲಿಂಕ್ ಕೆಳಗೆ ನೀಡಿದ್ದೇವೆ ನೋಡಿ.
