RRC railway recruitment 2024 :
ಡೈಲಿ ಕನ್ನಡ ನ್ಯೂಸಿಗೆ ಈ ಲೇಖನದಲ್ಲಿ ನಾವು ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಹೊಸ ಅಧಿ ಸೂಚನೆಯ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಆರ್ ಆರ್ ಸಿ ರೈಲ್ವೆ ರೆಕ್ರೂಟ್ಮೆಂಟ್ ಇತ್ತೀಚಿಗೆ ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲು ಅಧಿಕೃತ ಅಧಿಸೂಚನೆಯನ್ನು ತನ್ನ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ. ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ರೈಲ್ವೆ ನೇಮಕಾತಿಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದೆ ಆಸಕ್ತಿ ಇರುವವರು ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ಕ್ರೀಡಾ ಕೋಟಾದ ಅಡಿಯಲ್ಲಿ ನೇಮಕಾತಿಯನ್ನು ಮಾಡಲಾಗುತ್ತಿದೆ ಭಾರತದಾದ್ಯಂತ ನೇಮಕಾತಿ ಮಾಡಲಾಗುತ್ತಿದೆ. ಕ್ರೀಡಾಕೂಟ ದಾಡಿಯಲ್ಲಿ 38 ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಆಸಕ್ತಿ ಇರುವವರು ಆನ್ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಈ ಲೇಖನದಲ್ಲಿ ನಾವು ರೈಲ್ವೆ ಹೊಸ ನೇಮಕಾತಿಗೆ ಬೇಕಾಗಿರುವ ಎಲ್ಲಾ ಮಾಹಿತಿಯನ್ನು ಅಂದರೆ ಬೇಕಾಗಿರುವ ವಯಸ್ಸಿನ ಮಿತಿ ವಿದ್ಯಾಭ್ಯಾಸದ ಮಾಹಿತಿ ಅರ್ಜಿ ಶುಲ್ಕದ ಮಾಹಿತಿ ಹುದ್ದೆಗಳ ಸಂಕ್ಷಿಪ್ತ ಮಾಹಿತಿ ಅರ್ಜಿ ನಮೂನೆ ಇತರೆಲ್ಲ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ನೀಡುತ್ತೇನೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೆ ಓದಿ.
ಹುದ್ದೆಗಳ ಸರಳ ಮಾಹಿತಿ – Short summary :
ನೇಮಕಾತಿ ಇಲಾಖೆ : ಭಾರತೀಯ ರೈಲ್ವೆ ಇಲಾಖೆಯ ಆರ್ ಆರ್ ಸಿ
ಹುದ್ದೆಗಳ ವಿಧ : ಕ್ರೀಡಾ ಕೋಟಾ ದಾಡಿಯಲಿ ( ಸಾಮಾನ್ಯ ಅಭ್ಯರ್ಥಿಗಳಿಗೆ ಇಲ್ಲ )
ಹುದ್ದೆಗಳ ಹೆಸರು : ಗ್ರೂಪ್ ಡಿ ಹುದ್ದೆಗಳು
ಉದ್ಯೋಗ ಸ್ಥಳ : ಭಾರತದ ಆದ್ಯಂತ
ಒಟ್ಟು ಹುದ್ದೆಗಳ ಸಂಖ್ಯೆ : 38
ರೈಲ್ವೆ ಹುದ್ದೆಗಳ ಮಾಹಿತಿಗಳು ಈ ಕೆಳಗಿನಂತಿವೆ:
- ಫುಟ್ಬಾಲ್ ಮೆನ್ ಒಟ್ಟು 5
- ವೀಟ್ ಲಿಫ್ಟಿಂಗ್ ಮೆನ್ 2
- ಅಥ್ಲೆಟಿಕ್ಸ್ ಮಹಿಳೆ 2
- ಅಥ್ಲೆಟಿಕ್ಸ್ ಪುರುಷ 6
- ಬಾಕ್ಸಿಂಗ್ ಪುರುಷ 3
- ಬಾಕ್ಸಿಂಗ್ ಮಹಿಳೆ 1
- ಸ್ವಿಮಿಂಗ್ ಪುರುಷ 3
- ಟೇಬಲ್ ಟೆನ್ನಿಸ್ ಪುರುಷ 2
- ಹಾಕಿ ಪುರುಷ 4
- ಇತರೆ 11
ನೇಮಕಾತಿಗೆ ಬೇಕಾಗಿರುವ ವಿದ್ಯಾಭ್ಯಾಸದ ಮಾಹಿತಿಗಳು
ರೈಲ್ವೆ ಹೊಸ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಗಮನಕ್ಕೆ ರೈಲ್ವೆ ಇಲಾಖೆಯು ಕ್ರೀಡಾ ಕೋಟಾದ ಅಡಿಯಲ್ಲಿ ನೇಮಕಾತಿಯನ್ನು ಮಾಡಲಾಗುತ್ತದೆ. ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಈ ಮೇಲಿನ ಅರ್ಹತೆ ಹೊಂದಿರುವವರು ಯಾವುದೇ ವಿಶ್ವವಿದ್ಯಾಲಯ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಶಿಕ್ಷಣವನ್ನು ಪೂರ್ಣ ಮಾಡಿರಬೇಕು. ಕ್ರೀಡಾ ಕೋಟಾದ ಅಭ್ಯರ್ಥಿಗಳು ಈ ಮೇಲೆ ನೀಡಿರುವ ವಿದ್ಯಾಭ್ಯಾಸದ ಅರ್ಹತೆಯನ್ನು ಹೊಂದಿದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬೇಕಾಗಿರುವ ವಿದ್ಯಾಭ್ಯಾಸದ ಮಾಹಿತಿಯಲ್ಲಿ ಯಾವುದೇ ಗೊಂದಲವಿದ್ದರೆ ಅಭ್ಯರ್ಥಿಗಳು ಸಂಸ್ಥೆಯಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಇತ್ತೀಚಿಗೆ ಬಿಡುಗಡೆಯಾಗಿರುವ ಹೊಸ ನೋಟಿಫಿಕೇಶನ್ ಅನ್ನು ನೋಡಬಹುದು.
ಬೇಕಾಗಿರುವ ವಯಸ್ಸಿನ ಮಿತಿಯ ಮಾಹಿತಿಗಳು :
ರೈಲ್ವೆ ರಿಕ್ರೂಟ್ಮೆಂಟ್ ಸೆಲ್ RRC ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯಸ್ಸು 25 ವರ್ಷ ಆಗಿರಬೇಕು. ವಯಸ್ಸಿನ ಮಿತಿಯ ಸಡಲಿಕ್ಕೆ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ. ಆಸತ್ತಿರುವವರು ಅಲ್ಲಿ ಹೋಗಿ ನೋಡಬಹುದು.
ಆಯ್ಕೆಯ ವಿಧಾನ :
ರೈಲ್ವೆ ನೇಮಕಾತಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಪರೀಕ್ಷೆ ಇರುವುದಿಲ್ಲ. ವಿದ್ಯಾರ್ಥಿಗಳು ಮೆರಿಟ್ ಮೂಲಕ ಆಯ್ಕೆಯಾಗುತ್ತಾರೆ. ಮೆರಿಟ್ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಡಾಕ್ಯುಮೆಂಟ್ ವೆರಿಫಿಕೇಶನ್ ಮಾಡುವುದರ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಅಥವಾ ಫಿಸಿಕಲ್ ಪರೀಕ್ಷೆ ಇರುವುದಿಲ್ಲ ಅಭ್ಯರ್ಥಿಗಳ ಅಂಕಗಳ ಪ್ರಕಾರ ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ಅನ್ನು ತಯಾರಿಸಲಾಗುವುದು. ಆಕೆಯದ ಅಭ್ಯರ್ಥಿಗಳಿಗೆ ಇನ್ನೇನ್ ಮೂಲಕ ತಿಳಿಸಲಾಗುತ್ತದೆ.
ಅರ್ಜಿ ಶುಲ್ಕದ ಮಾಹಿತಿಗಳು :
ರೈಲ್ವೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಸಪ್ತ ಅಭ್ಯರ್ಥಿಗಳು ಎಕ್ಸಾಮ್ ಸೀಸನ್ ಬರ್ತಿ ಮಾಡಿ ತಮ್ಮ ಅರ್ಜಿ ನಮೂನೆಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವ ಜನರಲ್ ಅಭ್ಯರ್ಥಿಗಳಿಗೆ ಅಧಿಕೃತ ಅಧಿಸೂಚನೆಯಂತೆ 500 ರೂಪಾಯಿಗಳನ್ನು ವಿಧಿಸಲಾಗಿದೆ. ಇನ್ನು ಉಳಿದ ಎಸ್ ಸಿ ಎಸ್ ಟಿ, ಮಹಿಳಾ, ಮೈನಾರಿಟಿ ಅಭ್ಯರ್ಥಿಗಳಿಗೆ 250ಗಳ ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ. ಅಭ್ಯರ್ಥಿಗಳ ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದಾಗಿದೆ ಆನ್ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಕೊನೆಯ ಹಂತದಲ್ಲಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಕ್ರಮಗಳು :
- ಅಭ್ಯರ್ಥಿಗಳು ಮೊದಲಿಗೆ ರೈಲ್ವೆ ನೇಮಕಾತಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆರ್ ಆರ್ ಸಿ ಬಿಡುಗಡೆ ಮಾಡಿರುವ ಹೊಸ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಬೇಕು.
- ನಂತರ ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದರೆ ರಿಜಿಸ್ಟರ್ ಬಟನ್ ಅನ್ನು ಒತ್ತಿ ಅಭ್ಯರ್ಥಿಗಳು ತಮ್ಮ ಅಕೌಂಟನ್ನು ರಿಜಿಸ್ಟರ್ ಮಾಡಬೇಕು. ನಂತರ ಲಾಗಿನ್ ಆಗಿ ಅಭ್ಯರ್ಥಿಗಳು ಅಗತ್ಯ ಇರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು.
- ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಮತ್ತೊಮ್ಮೆ ನೀರಿದೆಲ್ಲ ಮಾಹಿತಿಗಳು ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
- ಎಲ್ಲಾ ಮಾಹಿತಿಗಳು ಸರಿ ಇದ್ದರೆ ಕೊನೆಯ ಹಂತದಲ್ಲಿ ಸಬ್ಮಿಟ್ ಬಟನ್ ಅನ್ನು ಒತ್ತುವ ಮೂಲಕ ಅರ್ಜಿ ನಮೂನೆಯನ್ನು ಸಲ್ಲಿಸಬೇಕು.
- ನಂತರ ಕೊನೆಯ ಹಂತದಲ್ಲಿ ಅರ್ಜಿ ನಮೂನೆಯ ಪ್ರಿಂಟ್ ಔಟ್ ಅನ್ನು ತೆಗೆದುಕೊಳ್ಳಬೇಕು.
ಅರ್ಜಿ ಸಲ್ಲಿಸುವವರ ಗಮನಕ್ಕೆ :
- ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಬಳಿ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಜಾತಿ ಸರ್ಟಿಫಿಕೇಟ್ ಪಾಸ್ಪೋರ್ಟ್ ಸೈಜ್ ಫೋಟೋ ಸಿಗ್ನೇಚರ್ ಫೋಟೋ ಮೊಬೈಲ್ ನಂಬರ್ ಇಮೇಲ್ ಐಡಿ ಹೊಂದಿರಬೇಕು.
- ಈ ಮೇಲೆ ನೀಡಿರುವ ಎಲ್ಲಾ ದಾಖಲೆಗಳನ್ನು ಅರ್ಜಿ ಸಲ್ಲಿಸುವಾಗ ಅಪ್ಲೋಡ್ ಮಾಡಲಾಗುತ್ತದೆ.
- ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಮಾಹಿತಿ ಇಲ್ಲವಾದರೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ಆದಿ ಸೂಚನೆಯನ್ನು ಸಂಪೂರ್ಣವಾಗಿ ಓದಿಯೇ ನಂತರ ಅರ್ಜಿಯನ್ನು ಸಲ್ಲಿಸಬೇಕು.
- ಅಧಿಕೃತ ನೋಟಿಫಿಕೇಶನ್ ಅಲ್ಲಿ ನೀಡಲಾಗಿರುವ ಎಲ್ಲಾ ಕ್ರೈಟೀರಿಯಗಳನ್ನು ನೀವು ಹೊಂದಿದ್ದರೆ ಮಾತ್ರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ಈ ರೈಲ್ವೆ ನೇಮಕಾತಿಯು ಕ್ರೀಡಾಕೂಟದ ಅಡಿಯಲ್ಲಿ ನಡೆಯುತ್ತದೆ ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
- ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಸ್ಕ್ಯಾನ್ ಮಾಡಿದ್ದ ಎಲ್ಲಾ ಮಾಹಿತಿ ಅಂದರೆ ವಿದ್ಯಾಭ್ಯಾಸದ ಸರ್ಟಿಫಿಕೇಟ್ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಭಾವಚಿತ್ರ ಸಿಗ್ನೇಚರ್ ಫೋಟೋ ಎಲ್ಲಾ ಮಾಹಿತಿಗಳು ಸರಿಯಾಗಿದೆ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿ.
- ಅರ್ಜಿ ಸಲ್ಲಿಸಲತ್ತಿರವ ಅಭ್ಯರ್ಥಿಗಳು ಕೊನೆಯ ದಿನಾಂಕದ ಮುನ್ನ ತಮ್ಮ ಅರ್ಜಿಯನ್ನು ಸಲ್ಲಿಸಿದರೆ ಉತ್ತಮ ಕೊನೆಯ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಅಪೂರ್ಣ ಅರ್ಜಿಗಳೆಂದು ಪರಿಗಣಿಸಲಾಗುತ್ತದೆ.
- ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ತೊಂದರೆಗಳನ್ನು ಅನುಭವಿಸಿದರೆ ರೈಲ್ವೆ ಇಲಾಖೆಯ ಸಹಾಯ ಕೇಂದ್ರಕ್ಕೆ ಕಾಂಟಾಕ್ಟ್ ಮಾಡಬಹುದು.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳ ಮಾಹಿತಿ :
ರೈಲ್ವೆ ಹೊಸ ನೇಮಕಾತಿಗೆ ಅರ್ಜಿ ಸಲ್ಲಿಸಲು ಈಗಾಗಲೇ ಆನ್ಲೈನ್ ಮೂಲಕ ಪ್ರಾರಂಭವಾಗಿದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 16, 2024 ಆಗಿರುತ್ತದೆ. ಆಸಕ್ತಿ ಇರುವ ಅಭ್ಯರ್ಥಿಗಳು ಈ ದಿನಾಂಕದ ಮುನ್ನ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಸಾಮಾನ್ಯ ಅಭ್ಯರ್ಥಿಗಳು ರೈಲ್ವೆ ಇಲಾಖೆಗೆ ಹೊರಡಿಸಿದ ಇನ್ನೊಂದು ಆರ್ ಪಿ ಎಫ್ ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಇದರ ಹೆಚ್ಚಿನ ಮಾಹಿತಿಯನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ರ್‌ಪಿಎಫ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದಾಗಿದೆ.
Important Note :
ರೈಲ್ವೆ ಇಲಾಖೆಗೂ ಡೈಲಿ ಕನ್ನಡ ನ್ಯೂಸ್ ಗೆ ಯಾವುದೇ ಸಂಬಂಧ ಇರುವುದಿಲ್ಲ. ನಾವು ಯಾವುದೇ ರೀತಿಯ ಸರ್ಕಾರಿ ಜಾಬ್ ಗಳನ್ನು ನೀಡುವುದಿಲ್ಲ. ನಾವು ಕೇವಲ ಸರ್ಕಾರ ಹೊರಡಿಸಿದ ಅಧಿಕೃತ ಅಧಿಸೂಚನೆಯ ಮಾಹಿತಿಯನ್ನು ಮಾತ್ರ ನಮ್ಮ ವೆಬ್ಸೈಟ್ನಲ್ಲಿ ಅಪ್ಡೇಟ್ ನೀಡುತ್ತೇವೆ. ಅಭ್ಯರ್ಥಿಗಳ ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಎಲ್ಲಾ ಮಾಹಿತಿಯನ್ನು ಓದಿ ನಂತರವೇ ತಮ್ಮ ಅರ್ಜಿಯನ್ನು ಸಲ್ಲಿಸಿ. ಈ ಲೇಖನ ಇಷ್ಟವಾದರೆ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ. ಪ್ರತಿದಿನ ದೇಶದ ದೇಶ ಸರ್ಕಾರಿ ಯೋಜನೆ ಸರಕಾರಿ ಉದ್ಯೋಗಗಳ ಮಾಹಿತಿಯನ್ನು ಪಡೆಯಲು ನಮ್ಮ ವೆಬ್ಸೈಟನ್ನು ಭೇಟಿ ನೀಡಿ ಧನ್ಯವಾದಗಳು. ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪನ್ನು ಜಾಯಿನ್ ಆಗಬಹುದು.
ನಮ್ಮ ಡೈಲಿ ಕನ್ನಡ ನ್ಯೂಸ್ ಸತ್ಯವಾದ ಮಾತು ನಿಖರವಾದ ಮಾಹಿತಿಯನ್ನು ಮಾತ್ರ ನೀಡುತ್ತೇವೆ. ನಾವು ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ನಮ್ಮ ವೆಬ್ಸೈಟ್ನಲ್ಲಿ ಪಬ್ಲಿಶ್ ಮಾಡುವುದಿಲ್ಲ. ಓದುಗರು ನಾವು ಪಬ್ಲಿಶ್ ಮಾಡುವ ಮಾಹಿತಿಗಳನ್ನು ಕೊನೆಯಲ್ಲಿ ನೀಡಿರುವ ಒರಿಜಿನಲ್ ಸೋರ್ಸ್ ಗೆ ಹೋಗಿ ಮಾಹಿತಿಯನ್ನು ವೆರಿಫೈ ಮಾಡಬಹುದು. ನಮ್ಮ ಮಾಹಿತಿಯಲ್ಲಿ ಯಾವುದೇ ತಪ್ಪುಗಳಿದ್ದರೆ ನಮಗೆ ಇಮೇಲ್ ಮೂಲಕ ತಿಳಿಸಬಹುದು ನಾವು ಅಪ್ಡೇಟ್ ಮಾಡಲು ಪ್ರಯತ್ನ ಪಡುತ್ತೇವೆ.
News source: https://ner.indianrailways.gov.in/
