ಈ ವಾರ ಪಿಎಫ್ ಪಾಸ್‌ಬುಕ್ ಏಕೆ ಓಪನ್ ಆಗುತ್ತಿಲ್ಲ? ಇಲ್ಲಿದೆ ಸಂಪೂರ್ಣ ವಿವರ ಮತ್ತು ಪರಿಹಾರ ಮಾರ್ಗಗಳು
ಈ ವಾರ ಪೂರ್ತಿ EPFO ಪಾಸ್‌ಬುಕ್ ಸೇವೆ ಬಳಸಲು ಪ್ರಯತ್ನಿಸಿದ ಹಲವರು ಈ ಮೇಲಿನ ಸಾಮಾನ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಪಾಸ್‌ಬುಕ್ ಓಪನ್ ಆಗುತ್ತಿಲ್ಲ ಇದರಿಂದ ಹಲವರಿಗೆ ತೊಂದರೆ ಆಗಿದೆ. “Service Unavailable” ಎಂದು ತೋರಿಸುತ್ತಿದೆ, ಅಥವಾ “Passbook not available at this time” ಎಂಬ ಪೇಜ್ ಓಪನ್ ಆಗುತ್ತಾ ಇದೆ. ಇಂತಹ ತೊಂದರೆ ಇದುವರೆಗೆ ಆಗಿರಲಿಲ್ಲ ಎಂಬ ಹಲವರ ಅಭಿಪ್ರಾಯವೂ ಇದೆ. ಪಾಸುಬುಕ್ ಸೇವೆ ಏಕೆ ಕೆಲಸ ಮಾಡುತ್ತಿಲ್ಲ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ ಇಲ್ಲಿ ಓದಿ.
🌐 ಇದಕ್ಕೆ ಕಾರಣವೇನು ಇಲ್ಲಿದೆ ನೋಡಿ ಮಾಹಿತಿ :
EPFO ಪಾಸ್‌ಬುಕ್ ವೆಬ್‌ಸೈಟ್ https://passbook.epfindia.gov.in/MemberPassBook/Login.jsp ನಲ್ಲಿ ಕೆಲವೊಮ್ಮೆ ತಾತ್ಕಾಲಿಕ ತಾಂತ್ರಿಕ ಸಮಸ್ಯೆಗಳು ಉಂಟಾಗಿದೆ ಈ ವಾರ ಪೂರ್ತಿ. ಈ ಸಮಸ್ಯೆಗೆ ಕಾರಣವಾಗಬಹುದಾದ ಕೆಲವು ಸಂಗತಿಗಳು ಇಲ್ಲಿವೆ:
- ಸರ್ವರ್ ಮೆಂಟೆನನ್ಸ್: EPFO ತನ್ನ ಸೈಟ್‌ಗಳಿಗೆ ನಿಯಮಿತ ನಿರ್ವಹಣಾ ಕೆಲಸಗಳನ್ನು ನಡೆಸುತ್ತದೆ. ಈ ಸಮಯದಲ್ಲಿ ಪಾಸ್‌ಬುಕ್ ಸೇವೆ ಲಭ್ಯವಿರುವುದಿಲ್ಲ. ಸರ್ವರ್ ಸರಿ ಆದ ನಂತರ ಸರಿಯಾಗಬಹುದು.
- ಹೆಚ್ಚಿನ ಬಳಕೆದಾರರ ಒತ್ತಡ: ತಿಂಗಳ ಮೊದಲ ವಾರ ಅಥವಾ ಸಂಬಳ ಜಮೆ ಆದ ದಿನಗಳಲ್ಲಿ ಲಕ್ಷಾಂತರ ಮಂದಿ ತಮ್ಮ ಖಾತೆ ಚೆಕ್ ಮಾಡುತ್ತಾ ಇರುತ್ತಾರೆ. ಹೆಚ್ಚಿನ ಜನರು ಒಂದೇ ಭಾರಿ ವೆಬ್ಸೈಟ್ ಗೆ ಭೇಟಿ ನೀಡುವುದರಿಂದ ಈ ಸಮಸ್ಯೆ ಉಂಟಾಗಿದೆ. ಇದರಿಂದ ಸರ್ವರ್ ಲೋಡ್ ಆಗಿ ಸ್ಥಗಿತಗೊಳ್ಳಬಹುದು.
- ಸಾಫ್ಟ್‌ವೇರ್ ಅಪ್‌ಡೇಟ್: ಕೆಲವೊಮ್ಮೆ EPFO ಸಿಸ್ಟಂ ಅಪ್‌ಡೇಟ್ ಮಾಡುತ್ತಿರುವ ಸಂದರ್ಭದಲ್ಲೂ ಪಾಸ್‌ಬುಕ್ ತಾತ್ಕಾಲಿಕವಾಗಿ ಡೌನ್ ಎಂದು ತೋರಿಸಬಹುದು.
- KYC ಲಿಂಕ್ ಸಮಸ್ಯೆ: ಕೆಲವು ಬಳಕೆದಾರರ KYC ಸಂಪೂರ್ಣವಾಗಿಲ್ಲದಿದ್ದರೆ, ಪಾಸ್‌ಬುಕ್ ಲೋಡ್ ಆಗದೆ ಇರುವ ಸಾಧ್ಯತೆಯೂ ಇದೆ.
✅ ತಕ್ಷಣದ ಪರಿಹಾರ ಮಾರ್ಗಗಳು ಇಲ್ಲಿದೆ ನೋಡಿ :
ಪಾಸ್‌ಬುಕ್ ಸೈಟ್ ಡೌನ್ ಇದ್ದರೂ, ನಿಮ್ಮ ಪಿಎಫ್ ಖಾತೆಯ ಇತ್ತೀಚಿನ ಬ್ಯಾಲೆನ್ಸ್ ತಿಳಿಯಲು ಇನ್ನೂ ಕೆಲವು ಸರಳ ಮಾರ್ಗಗಳಿವೆ:
1. ಮಿಸ್ಡ್ ಕಾಲ್ ಮೂಲಕ ಪಾಸ್ಬುಕ್ ಹಣ ಚೆಕ್ ಮಾಡಬಹುದು ಇಲ್ಲಿದೆ ಮಾಹಿತಿ :
9966044425 ನಂಬರ್‌ಗೆ ನಿಮ್ಮ UAN ಗೆ ಲಿಂಕ್ ಆದ ಮೊಬೈಲ್ ನಂಬರ್‌ನಿಂದ ಮಿಸ್ಡ್ ಕಾಲ್ ಕೊಡಿ. ಕೆಲವೇ ಸೆಕೆಂಡುಗಳಲ್ಲಿ EPFO ಕಡೆಯಿಂದ ನಿಮ್ಮ ಪಿಎಫ್ ಖಾತೆಯ ಇತ್ತೀಚಿನ ಬ್ಯಾಲೆನ್ಸ್ ಎಸ್‌ಎಂಎಸ್ ರೂಪದಲ್ಲಿ ಬರುತ್ತದೆ.
2. ಎಸ್‌ಎಂಎಸ್ ಮೂಲಕ
ನಿಮ್ಮ ಮೆಸೇಜ್ ಬಾಕ್ಸ್‌ನಲ್ಲಿ EPFOHO UAN KAN ಎಂದು ಟೈಪ್ ಮಾಡಿ ಮತ್ತು ಇದನ್ನು 7738299899 ಗೆ msg ಮಾಡಿ ತಮ್ಮ ಹಣವನ್ನು ಚೆಕ್ ಮಾಡಬಹುದು ಆಗಿದೆ . ಇದರಿಂದ ನಿಮ್ಮ ಪಿಎಫ್ ಬ್ಯಾಲೆನ್ಸ್, ಕೊನೆಯ ಕಂತು ಮಾಹಿತಿ ಇತ್ಯಾದಿ ಇಲ್ಲಾ pf ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದು.
3. UMANG ಆಪ್ ಮೂಲಕ ನೋಡಬಹುದು
ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಲ್ಲಿ UMANG ಆಪ್ ಡೌನ್‌ಲೋಡ್ ಮಾಡಿ. EPFO ವಿಭಾಗಕ್ಕೆ ಹೋಗಿ, “View Passbook” ಆಯ್ಕೆ ಮಾಡಿ. OTP ಮೂಲಕ ಲಾಗಿನ್ ಮಾಡಿ. ಕೆಲವು ವೇಳೆ ಇಲ್ಲಿ ಪಾಸ್‌ಬುಕ್ ಡೇಟಾ ನೋಡಬಹುದು ಆಗಿದೆ ಆದರೆ ಈ ಮೂಲಕ ನೋಡಲು ಸರ್ವರ್ ಇರಬೇಕು ಅವಾಗ ಮಾತ್ರ ಇಲ್ಲಿ ನೋಡಲು ಸಾಧ್ಯ.
💡 CONCLUSION
ಪಾಸ್‌ಬುಕ್ ಸೈಟ್ ಕೆಲದಿನಗಳಲ್ಲಿ ಮತ್ತೆ ಸರಿ ಆಗುತ್ತದೆ ಆದರೆ ಈ ಸಮಯದಲ್ಲಿ ಮಿಸ್ಡ್ ಕಾಲ್ ಮತ್ತು ಎಸ್‌ಎಂಎಸ್ ಸೇವೆಗಳನ್ನು ಪಡೆಯಬಹುದು ಆಗಿದೆ. EPFO ನ ಸೇವೆಗಳು ಸುರಕ್ಷಿತವಾಗಿದ್ದು, ನಿಮ್ಮ ಹಣಕ್ಕೆ ಯಾವುದೇ ಹಾನಿಯಾಗುವುದಿಲ್ಲ. ನೀವು ನಿಯಮಿತವಾಗಿ ಖಾತೆ ನೋಡುತ್ತಾ ಇರಿ, ನಿಮ್ಮ ಹಣದ ಮೇಲಿನ ನಿಗಾವಹಿಸಿ.
ಇಂತಹ ಉಪಯುಕ್ತ ಮಾಹಿತಿ, ಸರಳ ವಿಧಾನಗಳು ಮತ್ತು ಸರ್ಕಾರಿ ಹಾಗೂ ಖಾಸಗಿ ಉದ್ಯೋಗದ ಲೇಟೆಸ್ಟ್ ಅಪ್ಡೇಟ್ಸ್‌ಗಾಗಿ ನಮ್ಮ daily kannada ನ್ಯೂಸ್ ಅನ್ನು ಪ್ರತಿದಿನವೂ ವೀಕ್ಷಿಸಿ.
