ಓದುಗರಿಗೆ ವಂದನೆಗಳು ಇಂದಿನ ಲೇಖನದಲ್ಲಿ ಉಚಿತ ಪಡಿತರ ಚೀಟಿಗೆ ಸೇರ್ಪಡೆಯಾದ ಹೊಸದಾದ ಸೌಲಭ್ಯದ ಬಗ್ಗೆ ಮಾಹಿತಿ ನೀಡುತ್ತೇವೆ. ಸಾಮಾನ್ಯ ಜನರ ಶ್ರೇಯೋಬಿವೃದ್ದಿಗಾಗಿ ರಾಜ್ಯ ಅಥವಾ ಕೇಂದ್ರ ಸರಕಾರ ನೂತನ ಯೋಜನೆಗಳನ್ನು ಜಾರಿಗೆ ತರುತ್ತಲಿವೆ.ಹಾಗೆಯೇ ಇಂದು ನಾವು ಅಂಥದೇ ಹೊಸತಾಗಿ ದೊರಕುವ ಸೌಲಭ್ಯದ ಬಗ್ಗೆ ನಿಮಗೆ ತಿಳಿಸುತ್ತೇವೆ.
ರಾಜ್ಯ ಸರ್ಕಾರ ಈಗಾಗಲೇ ಹಲವು ಉಪಯುಕ್ತ ಯೋಜನೆಗಳ ಜಾರಿಗೆ ತಂದಿದೆ ಈಗಲೂ ಅಂತಹದೇ ಒಂದು ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ. ಜನ ಸಾಮಾನ್ಯರಿಗೆ ಪ್ರಮುಖವಾಗಿ ಬೇಕಾಗಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ಇಲಾಖೆ ವತಿಯಿಂದ ಆಹಾರ ಭದ್ರತಾ ಯೋಜನೆಯ ಮುಖಾಂತರ ಸೌಲಭ್ಯವನ್ನು ಒದಗಿಸಲು ಎಂದು ಸರ್ಕಾರ ಇತ್ತೀಚಿನ ಪ್ರಸ್ತಾವನೆಯಲ್ಲಿ ತಿಳಿಸಿದೆ.
ಪಡಿತರ ಚೀಟಿಗೆ ಸೀಮಿತ ಈ ಸೌಲಭ್ಯ :
14 ಲಕ್ಷ ಪಡಿತರ ಚೀಟಿದಾರರಿಗೆ ಈ ಒಂದು ಸೌಲಭ್ಯವು ಪ್ರಯೋಜನಕಾರಿಯಾಗಿದೆ. ಈಗಾಗಲೇ ಪ್ರತೀ ತಿಂಗಳು ಪಡಿತರ ಜೊತೆಗೆ ಒಂದು ಕೇಜಿ ಉಪ್ಪನು ನೀಡಲಾಗುತ್ತದೆ.
ಪ್ರಾಥಮಿಕ ಕುಟುಂಬಗಳಿಗೆ ಸರ್ಕಾರವು ಈಗಾಗಲೇ ಬೇಳೆಕಾಳು,ಗೋಧಿ,ಅಕ್ಕಿ ಸೌಲಭ್ಯ ನೀಡುತ್ತಿದೆ. ಉಪ್ಪನೂ ಇನ್ನೂ ಅದರ ಜೊತೆಗೆ ಸೇರಿಸಲಾಗುತ್ತದೆ.
ಈಗಾಗಲೇ ಹಣದುಬ್ಬರದ ಬೇಗೆಯಿಂದ ಮುಕ್ತಿಯನ್ನು ನೀಡಲು ಮತ್ತು ಪ್ರಮುಖವಾಗಿ ಜನ ಸಾಮಾನ್ಯರ ಪೌಷ್ಟಿಕತೆಯ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.ಅದಕ್ಕಾಗಿ ಬಡವರಿಗೆ ರೂ.8 ಕ್ಕೆ ಕೇಜಿ ಉಪ್ಪನು ಒದಗಿಸಲಾಗುವುದು.
ಗುಣಮಟ್ಟ ಹೇಗಿರುತ್ತದೆ?
ಸರ್ಕಾರ ಕಡಿಮೆ ಬೆಲೆಗೆ ಉಪ್ಪನು ನೀಡುತ್ತದೆ ಎಂದ ಕೂಡಲೇ ನಿಮಗೆ ಅದರ ಗುಣಮಟ್ಟದ ಬಗ್ಗೆ ಚಿಂತೆಯಾಗಬಹುದು ಅದಕ್ಕಾಗಿ ಉತ್ತರಾಖಾಂಡ ಸರ್ಕಾರವು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಗುಣಮಟ್ಟದ ಉಪ್ಪನು ನೀಡಲು ನಿರ್ಧರಿಸಿದೆ. ಈ ನಿರ್ಧಾರ ಬಹಳ ಪರಿಣಾಮಕಾರಿಯಾಗಲಿದೆ ಎಂದು ಸಾಬೀತುಪಡಿಸಿದೆ.
ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ.ಧನ್ಯವಾದಗಳು
