New ration card apply : ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಬಯಸುವವರಿಗೆ ಸಂತಸದ ಸುದ್ದಿ
ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ರೇಷನ್ ಕಾರ್ಡ್ ತಿದ್ದುಪಡಿಯ ಬಗ್ಗೆ ಇರುವ ಮಾಹಿತಿಯನ್ನು ಹೇಳುತ್ತೇವೆ. ಈ ಹಿಂದಿನ ತಿಂಗಳು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಸರ್ವರ್ ಸಮಸ್ಯೆಗಳಿಂದ ಕೆಲವೇ ಗಂಟೆಗಳಲ್ಲಿ ಆನ್ಲೈನ್ ಮೂಲಕ ರೇಷನ್ ಕಾರ್ಡ್ ಅಪ್ಡೇಟ್ ಮಾಡುವುದನ್ನು ಸ್ಥಗಿತ ಮಾಡಲಾಗಿತ್ತು. ಈ ಸಮಯದಲ್ಲಿ ಹಲವು ಮಂದಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದರು. ಇನ್ನು ಹೆಚ್ಚಿನ ಮಂದಿ ಹೊಸ ರೇಷನ್ ಕಾರ್ಡ್ ಮಾಡಲು ಕಾಯುತ್ತಿದ್ದಾರೆ. ಅಂತವರಿಗೆ ಹೊಸ ಸಂತೋಷ ಸುದ್ದಿಯನ್ನು ನೀಡಿದೆ. ಈ ಲೇಖನದಲ್ಲಿ ನಾವು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೆ ಓದಿ.
ಕರ್ನಾಟಕದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವಾರು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದೆ. ಇದರಿಂದ ಹೊಸ ರೇಷನ್ ಕಾರ್ಡ್ ಮತ್ತು ಈಗಾಗಲೇ ಇರುವ ರೇಷನ್ ಕಾರ್ಡ್ ತಿದ್ದುಪಡಿ ಮಾಡುಲು ಹೆಚ್ಚಿನ ಮಂದಿ ಕಾಯುತ್ತಿದ್ದಾರೆ. ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಮನೆಯ ಮುಖ್ಯಸ್ಥರಿಗೆ 2000 ಈಗಾಗಲೇ ವರ್ಗಾವಣೆ ಆಗುತ್ತಿದೆ ಮತ್ತು ಇದರ ಜೊತೆ ಅನ್ನ ಭಾಗ್ಯ ಯೋಜನೆಯಲ್ಲಿ ಪ್ರತಿಮನೆಗೆ 170 ರೂಪಾಯಿಗಳು ದೊರೆಯುತ್ತದೆ. ಆದರೆ ರೇಷನ್ ಕಾರ್ಡ್ ತಿದ್ದುಪಡಿ ಮಾಡದೇ ಇರುವವರು ಮತ್ತು ಹೊಸ ರೇಷನ್ ಕಾರ್ಡ್ ಮಾಡುವವರಿಗೆ ಇದರ ಲಾಭಗಳು ದೊರೆಯುತ್ತಿಲ್ಲ. ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದು ಬಹು ಮುಖ್ಯವಾಗಿದೆ.
ಹೊಸ ರೇಷನ್ ಕಾರ್ಡ್ ಸಲ್ಲಿಸಲು ಪ್ರಾರಂಭ ದಿನಾಂಕದ ಮಾಹಿತಿಗಳು :
ಸರ್ಕಾರವು ಯಾವುದೇ ರೀತಿಯ ಅಧಕೃತ ಮಾಹಿತಿಯನ್ನು ಇಲ್ಲಿಯವರೆಗೆ ನೀಡಿಲ್ಲ. ಆದರೆ ಕೆಲವು ಖಾಸಗಿ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತೆ. ಇದಕ್ಕಿಂತ ಮೊದಲು ಈ ಹಿಂದೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಅವರೆಲ್ಲ ದಾಖಲೆಗಳನ್ನು ಪರಿಶೀಲಿಸಿ ರೇಷನ್ ಕಾರ್ಡ್ ಸಿಕ್ಕಿರದ ಇದ್ದವರಿಗೆ ಮೊದಲಿಗೆ ಪರಿಶೀಲನೆ ಮಾಡಿ ರೇಷನ್ ಕಾರ್ಡ್ ದೊರೆಯುತ್ತದೆ. ನಂತರ ಹೊಸ ರೇಷನ್ ಕಾರ್ಡ್ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಖಾಸಗಿ ಮಾಯಿ ಮಾಧ್ಯಮಗಳು ವರದಿಯನ್ನು ಮಾಡಿರುತ್ತದೆ. ಹೊಸ ರೇಷನ್ ಕಾರ್ಡ್ ವಿತರಣೆ ಮಾಡಿದ ನಂತರ ರೇಷನ್ ಕಾರ್ಡ್ ತಿದ್ದುಪಡಿ ಮಾಡಲ ಅವಕಾಶ ನೀಡಲಾಗುತ್ತದೆ.
How to apply for a new ration card in Karnataka?
ಖಾಸಗಿ ಮಾಧ್ಯಮಗಳ ವರದಿಯ ಪ್ರಕಾರ ಜೂನ್ ತಿಂಗಳ ಕೊನೆಯವರೆಗೆ ತಿದ್ದುಪಡಿ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದೆ. ಆದರೆ ಅಧಿಕೃತವಾಗಿ ಸರ್ಕಾರ ಇದರ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ನೀಡಿಲ್ಲ. ಹೊಸ ರೇಷನ್ ಕಾರ್ಡ್ ಮಾಡಲು ಬೇಕಾಗಿರುವ ಅಗತ್ಯ ದಾಖಲೆಗಳ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ ಸಂಪೂರ್ಣವಾಗಿ ಓದಿ.
ಬೇಕಾಗಿರುವ ಅಗತ್ಯ ದಾಖಲೆಗಳ ಮಾಹಿತಿಗಳು ಇಲ್ಲಿದೆ : ಹೊಸ ರೇಷನ್ ಕಾರ್ಡ್ ಅಪ್ಲಿಕೇಶನ್
- ಅಭ್ಯರ್ಥಿಗಳ ಬಳಿ ತಮ್ಮ ಆಧಾರ್ ಕಾರ್ಡ್ ಹೊಂದಿರಬೇಕು.
- ವ್ಯಾಲಿಡಿ ಆಗಿರುವ ಆದಾಯ ಪ್ರಮಾಣ ಪತ್ರ ಮತ್ತು ತಮ್ಮ ಜಾತಿಯ ಪ್ರಮಾಣ ಪತ್ರ ಹೊಂದಿರಬೇಕು
- ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಾಸ ಸ್ಥಳದ ಪ್ರಮಾಣ ಪತ್ರ ಹೊಂದಿರಬೇಕು.
- ಅಭ್ಯರ್ಥಿಗಳ ಜನನ ಪ್ರಮಾಣ ಪತ್ರ ಹೊಂದಿರಬೇಕು.
- ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಒಂದಿರಬೇಕು.
ಈ ಮೇಲೆ ನೀಡಿರುವ ದಾಖಲೆಗಳು ಇದ್ದರೆ ಮಾತ್ರ ಅಭ್ಯರ್ಥಿಗಳಿಗೆ ಹೊಸ ರೇಷನ್ ಕಾರ್ಡ್ ಮಾಡಲು ಅವಕಾಶ ನೀಡಲಾಗುತ್ತದೆ. ಜನನ ಪ್ರಮಾಣ ಪತ್ರ ಎಲ್ಲಾ ಅಭ್ಯರ್ಥಿಗಳಿಗೆ ಅಗತ್ಯ ಇರುವುದಿಲ್ಲ. ಆರು ವರ್ಷಕ್ಕಿಂತ ಕೆಳಗಿರುವ ಮಕ್ಕಳಿದ್ದರೆ ಮಾತ್ರ ಜನನ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿದೆ. ಇನ್ನುಳಿದ ಅಭ್ಯರ್ಥಿಗಳಿಗೆ ಇದರ ಅವಶ್ಯಕತೆ ಇರುವುದಿಲ್ಲ. ಅಭ್ಯರ್ಥಿಗಳು ಸ್ವತಃ ತಮ್ಮ ಮೊಬೈಲ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಇಲ್ಲವಾದರೆ ಅಭ್ಯರ್ಥಿಗಳು ನಿಮ್ಮ ಹತ್ತಿರದ ರೇಷನ್ ಕಾರ್ಡ್ ತಿದ್ದುಪಡಿ ಕೇಂದ್ರ ಅಥವಾ ಗ್ರಾಮವನ್ ಬೆಂಗಳೂರು ಒನ್ ಕೇಂದ್ರಗಳಿಗೆ ಹೋಗಿ ತಮ್ಮ ಅರ್ಜಿಯನ್ನು ಸಲ್ಲಿಸಲು ಅವಕಾಶ ಇರುತ್ತದೆ.
ಅಭ್ಯರ್ಥಿಗಳು ಸ್ವತಃ ಅರ್ಜಿ ಸಲ್ಲಿಸಲು ಬಯಸಿದರೆ ಈ ಲೇಖನದ ಕೊನೆಯಲ್ಲಿ ಅಧಿಕೃತ ವೆಬ್ಸೈಟ್ ಲಿಂಕ್ ಅನ್ನು ನೀಡಿರುತ್ತೇವೆ. ಆನ್ಲೈನ್ ಮೂಲಕ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಪ್ರಾರಂಭವಾದ ನಂತರ ಅಭ್ಯರ್ಥಿಗಳು ಅಲ್ಲಿಗೆ ಹೋಗಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
SBI ಹೊಸ ನೇಮಕಾತಿ , ಬ್ಯಾಂಕಿಂಗ್ ಅಡ್ವೈಸರ್, ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ
ಡೈಲಿ ಕನ್ನಡ ನ್ಯೂಸ್ ಯಾವುದೇ ಜಾಬ್ ಗಳನ್ನು ಸುಳ್ಳು ಸುದ್ದಿಗಳನ್ನು ನೀಡುವುದಿಲ್ಲ. ನಮಗೂ ಸರ್ಕಾರಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಅಭ್ಯರ್ಥಿಗಳು ಯಾವುದೇ ಅರ್ಜಿಗಳನ್ನು ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಯೇ ನಂತರವೇ ತಮ್ಮ ಅರ್ಜಿಯನ್ನು ಸಲ್ಲಿಸಿ. ನಂತರ ಯಾವುದೇ ಸಮಸ್ಯೆಗಳನ್ನು ಎದುರಿಸಿದರೆ ಅದಕ್ಕೆ ನಾವು ಜವಾಬ್ಧರಾಗಿರುವುದಿಲ್ಲ. ಪ್ರತಿದಿನ ಸರ್ಕಾರಿ ಸೇವೆಗಳ ಮತ್ತು ಸರ್ಕಾರಿ ಜಾಬ್ ಅಪ್ಡೇಟ್ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಹಣ್ಣು ಜಾಯಿನ್ ಆಗಬಹುದು ಈ ಲೇಖನ ಓದಿದ್ದಕ್ಕಾಗಿ ಧನ್ಯವಾದಗಳು.
Ration card apply official link : https://ahara.kar.nic.in/public_new_rc/app_offline_current.htm
