ಕೊಂಕಣ ರೈಲ್ವೇ ನೇಮಕಾತಿ – Konkan railway recruitment 2024
ಕೊಂಕಣ ರೈಲ್ವೆ ಅಧಿಕಾರಿಗಳು ಇತ್ತೀಚಿಗೆ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹೋಗಿ ಇದರಲ್ಲಿ ಹಾಜರಾಗಬಹುದು. ಸಂಸ್ಥೆಯ ಅಧಿಕೃತ ಮಾಹಿತಿಯಂತೆ ತಾಂತ್ರಿಕ ಸಹಾಯಕ ಮತ್ತು ವಿನ್ಯಾಸ ಸಹಾಯಕ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳಿಗೆ ಗರಿಷ್ಠ ಒಂದು ವರ್ಷ ಅವಧಿಗೆ ಮಾತ್ರ ಭರ್ತಿ ಮಾಡಲು ನೇಮಕಾತಿ ಮಾಡಲಾಗುತ್ತಿದೆ. ಆಸಕ್ತಿ ಇರುವವರು ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ ಈ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ನೋಡಿ.
ಹುದ್ದೆಗಳ ವಿವರಗಳು ( Job Details ) :
1. ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಎಲೆಕ್ಟ್ರಿಕ್ ಹುದ್ದೆಗಳು ಹುದ್ದೆಗಳ ಸಂಖ್ಯೆ ಒಟ್ಟು 3.
2. ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಎಲೆಕ್ಟ್ರಿಕ್ ಹುದ್ದೆಗಳು ಒಟ್ಟು ಹುದ್ದೆಗಳ ಸಂಖ್ಯೆ 15.
3. ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಸಿವಿಲ್ ಹುದ್ದೆಗಳು ಒಟ್ಟು 4 ಹುದ್ದೆಗಳು.
4. ಡಿಸೈನ್ ಅಸಿಸ್ಟೆಂಟ್ ಎಲೆಕ್ಟ್ರಿಕ್ ಹುದ್ದೆಗಳು ಒಟ್ಟು ಹುದ್ದೆಗಳ ಸಂಖ್ಯೆ 2.
5. ಟೆಕ್ನಿಕಲ್ ಅಸಿಸ್ಟೆಂಟ್ ಎಲೆಕ್ಟ್ರಿಕ್ ಹುದ್ದೆಗಳು ಒಟ್ಟು ಹುದ್ದೆಗಳ ಸಂಖ್ಯೆ 15.
6. AEE/ ಕಾಂಟ್ರಾಕ್ಟ್ ಒಟ್ಟು ಹುದ್ದೆಗಳ ಸಂಖ್ಯೆಗಳು 3.
ವೇತನದ ಮಾಹಿತಿಗಳು ( Salary Details ) :
ಹುದ್ದೆಗಳ ಅನುಸಾರವಾಗಿ ವೇತನವನ್ನು ನೀಡಲಾಗುತ್ತದೆ. ಆಯ್ಕೆಯಾದ ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಎಲೆಕ್ಟ್ರಿಕ್ ಎಲೆಕ್ಟ್ರಿಕಲ್ ಅಭ್ಯರ್ಥಿಗಳಿಗೆ ರೂ.44900 ವೇತನವನ್ನು ನೀಡಲಾಗುತ್ತದೆ. ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಎಲೆಕ್ಟ್ರಿಕಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 35400 ವೇತನವನ್ನು ನೀಡಲಾಗುತ್ತದೆ. ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಸಿವಿಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.35,400 ವೇತನವನ್ನು ನೀಡಲಾಗುತ್ತದೆ. ಡಿಸೈನ ಅಸಿಸ್ಟೆಂಟ್ ಎಲೆಕ್ಟ್ರಿಕಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 35,400 ವೇತನವನ್ನು ನೀಡಲಾಗುತ್ತದೆ. ಟೆಕ್ನಿಕಲ್ ಅಸಿಸ್ಟೆಂಟ್ ಎಲೆಕ್ಟ್ರಿಕಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 25000 ವೇತನವನ್ನು ನೀಡಲಾಗುತ್ತದೆ. AEE ಅಥವಾ ಕಾಂಟ್ರಾಕ್ಟರ್ ಅಭ್ಯರ್ಥಿಗಳಿಗೆ 56100 ವೇತನವನ್ನು ನೀಡಲಾಗುತ್ತದೆ.
ಬೇಕಾಗುವ ಶೈಕ್ಷಣಿಕ ಅರ್ಹತೆಯ ಮಾಹಿತಿಗಳು ( Education Qulification ) :
1. ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಎಲೆಕ್ಟ್ರಿಕಲ್ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯದಿಂದ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಬಿ ಟೆಕ್ ಎಲೆಕ್ಟ್ರಿಕಲ್ ಅಥವಾ ಬಿಇ ಎಲೆಕ್ಟ್ರಿಕಲ್ ಶಿಕ್ಷಣವನ್ನು ಪಡೆದಿರಬೇಕು.
2. ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಎಲೆಕ್ಟ್ರಿಕಲ್: ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಡಿಪ್ಲೋಮೋ ಎಲೆಕ್ಟ್ರಿಕಲ್ ಅಥವಾ ಬಿಇ ಎಲೆಕ್ಟ್ರಿಕಲ್ ಪದವಿಯನ್ನು ಪಡೆದಿರಬೇಕು. ಈ ಶಿಕ್ಷಣ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಪಡೆಯುತ್ತಾರೆ.
3. ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಸಿವಿಲ್ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಡಿಪ್ಲೋಮೋ ಸಿವಿಲ್ ಪದವಿ ಅಥವ ಬಿ ಇ ಶಿಕ್ಷಣವನ್ನು ಪಡೆದಿರಬೇಕು.
4. ಡಿಸೈನ್ ಅಸಿಸ್ಟೆಂಟ್ ಎಲೆಕ್ಟ್ರಿಕಲ್ ಹುದ್ದೆಗಳು : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಅಥವಾ ಡ್ರಾಫ್ಟ್ ಮ್ಯಾನ್ ಐಟಿಐ ಪದವಿಯನ್ನು ಪಡೆದಿರಬೇಕಾಗುತ್ತದೆ.
5. ಟೆಕ್ನಿಕಲ್ ಅಸಿಸ್ಟೆಂಟ್ ಎಲೆಕ್ಟ್ರಿಕಲ್ ಹುದ್ದೆಗಳು : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಅಥವಾ ಮಂಡಳಿಯಿಂದ ಐಟಿಐ ಪದವಿಯನ್ನು ಹೊಂದಿರಬೇಕು. ಯಾವುದೇ ಐಟಿಐ ಮಾಡಿದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಪಡೆಯುತ್ತಾರೆ.
ಅರ್ಜಿ ಶುಲ್ಕದ ಮಾಹಿತಿಗಳು ( Govt Fees Details ) :
ಅರ್ಜಿ ಸಲ್ಲಿಸಲು ಬಯಸುವ ಎಲ್ಲಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಅಭ್ಯರ್ಥಿಗಳು ಉಚಿತವಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಬೇಕಾಗಿರುವ ವಯಸ್ಸಿನ ಮಿತಿಯ ಮಾಹಿತಿಗಳು ( Age limit Details ) :
ಮೇಲೆ ನೀಡಿರುವ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯಸ್ಸು 45 ವರ್ಷ ಆಗಿರಬೇಕು. ಈ ವಯಸ್ಸಿನ ಮಿತಿಯ ಒಳಗೆ ಬರುವ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಗರಿಷ್ಠ ಐದು ವರ್ಷಗಳ ವಯಸ್ಸಿನ ಮಿತಿಯಲ್ಲಿ ಸಡಲಿಕ್ಕೆಯನ್ನು ನೀಡಲಾಗಿದೆ. ಇನ್ನು ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 3 ವರ್ಷಗಳ ವಯಸ್ಸಿನ ಮಿತಿಯಲ್ಲಿ ಸಡಲಿಕೆ ನೀಡಲಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಂಗವಿಕಲ ಅಭ್ಯರ್ಥಿಗಳಿಗೆ ಗರಿಷ್ಠ 10 ವರ್ಷಗಳ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ ಮಾಹಿತಿಗಳು ( Selection Process ) :
ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಭಾಗಿಯಾಗಿ ಈ ಮೇಲಿನ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿದೆ. ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಅಗತ್ಯ ದಾಖಲೆಗಳಾಗಿರುವ ಅರ್ಜಿ ನಮೂನೆ ನಿಮ್ಮ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ ವಿದ್ಯಾಭ್ಯಾಸ ಮತ್ತು ನಿಮ್ಮ ಅನುಭವದ ಸರ್ಟಿಫಿಕೇಟ್ ಎಲ್ಲಾ ದಾಖಲೆಗಳೊಂದಿಗೆ ಜೂನ್ 5 ಮತ್ತು ಜೂನ್ 21ರ ನಡುವೆ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.
1. ಅಭ್ಯರ್ಥಿಗಳು ಮೊದಲಿಗೆ ಸಂಸ್ಥೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಬೇಕು ಅಧಿಕೃತ ವೆಬ್ಸೈಟ್ನಲ್ಲಿ ಸಂಸ್ಥೆಗೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯ ಲಿಂಕನ್ನು ಕಾಣಬಹುದು.
2. ಮೊದಲಿಗೆ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಬೇಕು. ನಂತರ ಅರ್ಜಿ ನಮೂನೆಯನ್ನು ಪ್ರಿಂಟ್ ಔಟ್ ತೆಗೆದುಕೊಂಡು ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಯಾವುದೇ ತಪ್ಪುಗಳನ್ನು ಮಾಡದೇ ಭರ್ತಿ ಮಾಡಬೇಕು.
3. ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ತಾವು ನೀಡಿರುವ ಎಲ್ಲಾ ಮಾಹಿತಿಗಳು ಸರಿಯಾಗಿದೆ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಎಲ್ಲಾ ಮಾಹಿತಿಗಳು ಸರಿಯಾಗಿದ್ದರೆ ಕೊನೆಯಲ್ಲಿ ಅರ್ಜಿ ಸಲ್ಲಿಸುವವರ ಸಿಗ್ನೇಚರ್ ಮತ್ತು ದಿನಾಂಕವನ್ನು ಹಾಕಬೇಕು.
4. ನಂತರ ಮೇಲೆ ಹೇಳಲಾಗಿರುವಂತೆ ಅರ್ಜಿ ನಮೂನೆಯ ಜೊತೆ ಬೇಕಾಗಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಲಗ್ಗತ್ತಿಸಿ ಮೇಲೆ ದಿನಾಂಕಕ್ಕೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.
5. ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ನೀಡಿರುವ ಪ್ರದರ್ಶನದ ಮೇಲೆ ಸೂಕ್ತ ಅಭ್ಯರ್ಥಿಗಳನ್ನು ಸಂಸ್ಥೆ ಬಿಡುಗಡೆ ಮಾಡಿರುವ ಅಧಿಕೃತ ನೋಟಿಫಿಕೇಶನ್ ಪ್ರಕಾರ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
6. ನೀರ ಸಂದರ್ಶನ ನಡೆಯುವ ಸ್ಥಳವನ್ನು ಅಧಿಕೃತ ಅಧಿಸೂಚನೆಯಲ್ಲಿ ಕಾಣಬಹುದಾಗಿದೆ.
ಅರ್ಜಿ ಸಲ್ಲಿಸುವವರ ಗಮನಕ್ಕೆ :
ಡೈಲಿ ಕನ್ನಡ ನ್ಯೂಸ್ ಯಾವುದೇ ರೀತಿಯ ಜಾಬ್ ಗಳನ್ನು ನೀಡುವುದಿಲ್ಲ. ನಾವು ಕೇವಲ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯ ಮಾಹಿತಿಯನ್ನು ಮಾತ್ರ ನಮ್ಮ ವೆಬ್ಸೈಟ್ನಲ್ಲಿ ಪಬ್ಲಿಶ್ ಮಾಡುತ್ತೇವೆ. ನಾವು ಸರ್ಕಾರಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ನಮ್ಮ ವೆಬ್ಸೈಟ್ನಲ್ಲಿ ನಾವು ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಸುದ್ದಿಗಳನ್ನು ಪಬ್ಲಿಶ್ ಮಾಡುವುದಿಲ್ಲ. ನಿಖರವಾದ ನಿಜ ಸುದ್ದಿಗಳನ್ನು ಮಾತ್ರ ಪಬ್ಲಿಶ್ ಮಾಡುತ್ತೇವೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರವೇ ನಿಮ್ಮ ಅರ್ಜಿಯನ್ನು ಸಲ್ಲಿಸಿ. ಅರ್ಜಿಯನ್ನು ಸಲ್ಲಿಸುವಾಗ ಯಾವುದೇ ತೊಂದರೆಗಳನ್ನು ಅನುಭವಿಸಿದರೆ ಅದಕ್ಕೆ ನಾವು ಜವಾಬ್ದಾರರಾಗಿರುವುದಿಲ್ಲ.
ನಮ್ಮ ವೆಬ್ ಸೈಟ್ ನಲ್ಲಿ ಪ್ರತಿದಿನ ನಾವು ಕೇಂದ್ರ ಸರ್ಕಾರ ( central government jobs ) ಮತ್ತು ರಾಜ್ಯ ಸರ್ಕಾರದ (Karntaka government jobs ) ವಿವಿಧ ಹುದ್ದೆಗಳ ಬಗ್ಗೆ ಅಪ್ಡೇಟ್ಗಳನ್ನು ನೀಡುತ್ತೇವೆ. ಈ ಲೇಖನದಲ್ಲಿ ನೀಡಿರುವ ಮಾಹಿತಿಗಳು ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಮಾಹಿತಿ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಪ್ರತಿದಿನ ಜಾಬ್ ಅಪ್ಡೇಟ್ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು.
News source official website : https://konkanrailway.com
