ಪೋಸ್ಟ್ ಆಫೀಸ್ ಶಾರ್ಟ್ ಲಿಸ್ಟ್ ಔಟ್ India Post GDS 2025 Result | Download PDF ಇಂಡಿಯಾ ಪೋಸ್ಟ್ ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ವಿವಿಧ GDS ಹುದ್ದೆಗಳಿಗೆ ನೇಮಕಾತಿ ಮಾಡಲಾಗಿತ್ತು. ನಿನ್ನೆ ಸಂಸ್ಥೆಯು ವಿವಿಧ ರಾಜ್ಯಗಳ ನೇಮಕಾತಿಗಳ ಶಾರ್ಟ್ ಲಿಸ್ಟ್ ಅನ್ನು ಬಿಡುಗಡೆ ಮಾಡಿರುತ್ತದೆ. ಒಟ್ಟು 22 ರಾಜ್ಯಗಳ ನೇಮಕಾತಿಯ ಫಲಿತಾಂಶವನ್ನು ಬಿಡುಗಡೆ ಮಾಡಿರುತ್ತದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ನೋಡಬಹುದು. ಅಭ್ಯರ್ಥಿಗಳು ಫಲಿತಾಂಶ ನೋಡಲು ಈ ಲೇಖನವನ್ನು ಕೊನೆಯವರೆಗೆ ಓದಿ.
ಒಟ್ಟು 21000 ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿತ್ತು. ಕರ್ನಾಟಕ ಸೇರಿದಂತೆ ಆಂಧ್ರ ಪ್ರದೇಶ ಬಿಹಾರ ಛತ್ತೀಸ್ಗಡ್ ಅಸ್ಸಾಂ ದೆಹಲಿ ಗುಜರಾತ್ ಹಿಮಾಚಲ ಪ್ರದೇಶ ತೆಲಂಗಾಣ ತಮಿಳುನಾಡು ಪಂಜಾಬ್ ಒಡಿಸ್ಸಾ ಮಧ್ಯ ಪ್ರದೇಶ ಮಹಾರಾಷ್ಟ್ರ ಕಾಶ್ಮೀರ ಸೇರಿದಂತೆ ವಿವಿಧ ಹುದ್ದೆಗಳ ವಿವಿಧ ರಾಜ್ಯಗಳ ಮೆರಿಟ್ ಪಟ್ಟಿಯನ್ನು ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ ರಾಜ್ಯವನ್ನು ಆಯ್ಕೆ ಮಾಡಿ ಆಯ್ಕೆಯಾದವರ ಪಟ್ಟಿಯನ್ನು ನೋಡಬಹುದಾಗಿದೆ.
ಅಧಿಕೃತ ಪಟ್ಟಿಯನ್ನು ನೋಡುವ ಕ್ರಮಗಳು :
- ಅಭ್ಯರ್ಥಿಗಳು ಮೊದಲಿಗೆ ಇಂಡಿಯಾ ಪೋಸ್ಟ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು ನಂತರ ಅಭ್ಯರ್ಥಿಗಳು ನೇಮಕಾತಿ ವಿಭಾಗಕ್ಕೆ ಕ್ಲಿಕ್ ಮಾಡಿ.
- ಇತ್ತೀಚಿಗೆ ಬಿಡುಗಡೆಯಾಗಿರುವ ನೋಟಿಫಿಕೇಶನ್ ಮೇಲೆ ಕ್ಲಿಕ್ ಮಾಡಿದರೆ ರಾಜ್ಯವಾರು ಇತ್ತೀಚಿಗೆ ಬಿಟ್ಟಿರುವ ಮೆರಿಟ್ ಲಿಸ್ಟ್ ನ ಪೇಜ್ ಅನ್ನು ಕಾಣಬಹುದು. ಅಭ್ಯರ್ಥಿಗಳು ತಮ್ಮ ರಾಜ್ಯವನ್ನು ಆಯ್ಕೆ ಮಾಡಿ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಹಾಕಿದವರ ಮಾಹಿತಿಯನ್ನು ಪಡೆಯುವುದಾಗಿದೆ.
- ಈ ಲೇಖನದ ಕೊನೆಯಲ್ಲಿ ಬಿಡುಗಡೆಯಾಗಿರುವ ಶಾರ್ಟ್ ಲಿಸ್ಟ್ ಫಲಿತಾಂಶದ ಪಿಡಿಎಫ್ ಅನ್ನು ನೀಡಿದ್ದೇವೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ಹಂತದಲ್ಲಿ ಡಾಕ್ಯುಮೆಂಟ್ ವೆರಿಫಿಕೇಶನ್ ನಡೆಸಲಾಗುತ್ತದೆ. ಡಾಕ್ಯುಮೆಂಟ್ ವೆರಿಫಿಕೇಶನ್ ಮುಗಿದ ನಂತರ ಅಭ್ಯರ್ಥಿಗಳಿಗೆ ಆರೋಗ್ಯ ಪರೀಕ್ಷೆಯನ್ನು ನಡೆಸಿ ಅಭ್ಯರ್ಥಿಗಳನ್ನು ನಿಗದಿತ ಸ್ಥಳದಲ್ಲಿ ನೇಮಕಾತಿಗೆ ಆಹ್ವಾನಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಡಾಕ್ಯುಮೆಂಟ್ ವೆರಿಫಿಕೇಶನ್ ನಡೆಸುವ ಸಂದರ್ಭದಲ್ಲಿ ನೀಡಿರುವ ದಾಖಲಾತಿಗಳನ್ನು ನೀಡಬೇಕಾಗುತ್ತದೆ.
