ಸರ್ಕಾರದಿಂದ ಬಿಡುಗಡೆ ಆಗಿರುವ ಯೋಜನೆಯ ಹಣವನ್ನು ಮೊಬೈಲ್ ಅಲ್ಲೇ ಚೆಕ್ ಮಾಡಿ – DBT Status App
ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ಸರ್ಕಾರ ಬಿಡುಗಡೆ ಮಾಡಿರುವ ಹೊಸ ಅಪ್ಲಿಕೇಶನ್ ಬಗ್ಗೆ ತಿಳಿಸುತ್ತೇವೆ. ಸರ್ಕಾರದಿಂದ ಸಾರ್ವಜನಿಕರಿಗೆ ಜಮಾವಾಗುವ ಎಲ್ಲಾ ರೀತಿಯ ಹಣದ ಸ್ಟೇಟಸ್ ಅನ್ನು ನೀವು ಕೇವಲ ಮೊಬೈಲ್ ನಲ್ಲಿ ನೋಡಿಕೊಳ್ಳಬಹುದು. ಕೇವಲ ಆಧಾರ್ ಕಾರ್ಡ್ ನಂಬರನ್ನು ನಮೂದಿಸಿದರೆ ಸರ್ಕಾರದಿಂದ ನಿಮಗೆ ಬರುವ ಎಲ್ಲಾ ಮಾಹಿತಿಗಳು ಮೊಬೈಲ್ನಲ್ಲಿ ದೊರೆಯುತ್ತದೆ. ಬೆಳೆ ಪರಿಹಾರ ನಿಧಿ, ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಮುಂತಾದ ಸರ್ಕಾರಿ ಯೋಜನೆಗಳ ಸರ್ಕಾರದಿಂದ ಸಾರ್ವಜನಿಕರಿಗೆ ಜಮಾ ಆಗಿರುವ ಹಣದ ಸ್ಟೇಟಸ್ ಅನ್ನು ಮೊಬೈಲಲ್ಲಿ ಪಡೆಯಬಹುದಾಗಿದೆ. ಇದಕ್ಕಾಗಿ ಸರ್ಕಾರವು ಹೊಸ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಿದೆ.
ಹೊಸ ಅಪ್ಲಿಕೇಶನ್ DBT ಆಗಿದೆ ಅಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದು ಅರ್ಥ. ಈ ಅಪ್ಲಿಕೇಶನ್ ಮೂಲಕ ಜನರ ಸುಲಭವಾಗಿ ಸರ್ಕಾರದಿಂದ ಬಿಡುಗಡೆಯಾಗಿರುವ ಹಣದ ಸ್ಟೇಟಸ್ ಅನ್ನು ನಿಮಿಷದಲ್ಲಿಗೆ ಪಡೆಯಬಹುದಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಕೆಳಗೆ ನಾವು ಈ ಯೋಜನೆಗಳ ಜಮಾ ಆಗಿರುವ ಸ್ಟೇಟಸ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಹಣ ಜಮಾ ಸ್ಟೇಟಸ್ ಚೆಕ್ ಮಾಡುವುದು ಹೇಗೆ : DBT Status App
- ಕರ್ನಾಟಕ ರಾಜ್ಯ ಸರ್ಕಾರವು ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಆಸಕ್ತರು ಮೊದಲಿಗೆ ನಿಮ್ಮ ಪ್ಲೇ ಸ್ಟೋರ್ ಓಪನ್ ಮಾಡಿ ಡಿ ಬಿ ಟಿ ಅಂತ ಟೈಪ್ ಮಾಡಿ ಮೊದಲು ಬರುವ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕು.

- ಅಪ್ಲಿಕೇಶನ್ ಇನ್ಸ್ಟಾಲ್ ಆದ ನಂತರ ಮೊದಲಿಗೆ ಅಭ್ಯರ್ಥಿಗಳು ತಮ್ಮ ಆಧಾರ್ ಸಂಖ್ಯೆ ಮತ್ತು ನಿಮ್ಮ ಹೆಸರನ್ನು ನಮೂದಿಸಿ ಸಬ್ಮಿಟ್ ಬಟನ್ ಅನ್ನು ಒತ್ತಬೇಕು. ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿ ಸಬ್ಮಿಟ್ ಕೊಡಬೇಕು.

- ನಂತರ ನಿಮಗೆ 6 ಸಂಖ್ಯೆಯ ಪಿನ್ ಅನ್ನು ಕೇಳುತ್ತದೆ. ಮೊದಲಬಾರಿ ಲಾಗಿನ್ ಆಗುವುದಾದರೆ ಯಾವುದಾದರೂ ನಾಲ್ಕು ಸಂಖ್ಯೆಯ ಪಿನ್ನನ್ನು ಸೆಟ್ ಮಾಡಬೇಕು ನಂತರ ಲಾಗಿನ್ ಆಗುತ್ತದೆ.

- ನಂತರ ನಿಮಗೆ ಹೋಂ ಪೇಜ್ ನಲ್ಲಿ ಭಾಷೆಯನ್ನು ಆಯ್ಕೆ ಮಾಡುವ ಪೇಜ್ ಓಪನ್ ಆಗುತ್ತದೆ. ನೀವು ಇಲ್ಲಿ ಕನ್ನಡ ಅರ್ಥ ಇಂಗ್ಲಿಷ್ ಭಾಷೆಯನ್ನು ಆಯ್ಕೆ ಮಾಡಬಹುದಾಗಿದೆ.
- ಮೈ ಪ್ರೊಫೈಲ್ ಪೇಜ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಎಲ್ಲಾ ಮಾಹಿತಿಗಳನ್ನು ತಿದ್ದುಪಡಿ ಮಾಡಿ ಅಪ್ಲೋಡ್ ಮಾಡಬಹುದು. ಉದಾಹರಣೆಗೆ ನಿಮ್ಮ ಮೊಬೈಲ್ ಸಂಖ್ಯೆ ಹೆಸರು ಜನ್ಮ ದಿನಾಂಕ ಮುಂತಾದ ಮಾಹಿತಿಗಳನ್ನು ಎಡಿಟ್ ಮಾಡಲು ಅವಕಾಶ ನೀಡಿದ್ದಾರೆ.
- ನಿಮ್ಮ ಬಳಿ ಯುಟಿಆರ್ ನಂಬರ್ ಇದ್ದರೆ ಪಾವತಿ ಸ್ತಿಳಿ ಸ್ಥಿತಿ ಮೇಲೆ ಕ್ಲಿಕ್ ಮಾಡಿದರೆ ಯಾವ ಯೋಜನೆ ಅಡಿಯಲ್ಲಿ ನಿಮಗೆ ಎಷ್ಟು ಹಣ ಜಮಾ ಆಗಿದೆ ಎಂಬುದರ ಮಾಹಿತಿಯನ್ನು ಇಲ್ಲಿ ಪಡೆಯಬಹುದಾಗಿದೆ.

- ಮೊದಲಿಗೆ ನಿಮ್ಮ ಆಧಾರ್ ಸಂಖ್ಯೆಗೆ ಯಾವ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ ಎಂಬುದನ್ನು ಮೊದಲಿಗೆ ಚೆಕ್ ಮಾಡಿಕೊಳ್ಳಬೇಕು. ಆನಂತರ ನಾವು ಪೇಮೆಂಟ್ ಹಿಸ್ಟರಿ ಚೆಕ್ ಮಾಡಬಹುದಾಗಿದೆ. ನಂತರ ನಮಗೆ ಯಾವ ವರ್ಷ ಸರ್ಕಾರದಿಂದ ನಮ್ಮ ಖಾತೆಗೆ ಹಣ ಜಮಾ ಆಗಿದೆ ಅದು ಯಾವ ಯೋಜನೆಯ ಮೂಲಕ ನಮಗೆ ಬಂದಿದೆ ಎಂಬುದರ ಮಾಹಿತಿಯನ್ನು ಪಡೆಯಬಹುದಾಗಿದೆ.
- ಅಕೌಂಟ್ ಚೆಕ್ ಮಾಡಿದ ನಂತರ ಪೇಮೆಂಟ್ ಹಿಸ್ಟರಿ ಕಾಣಬಹುದು. ಅಲ್ಲಿ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಜಮಾ ಆಗಿರುವ ಎಲ್ಲಾ ಯೋಜನೆಗಳ ಮಾಹಿತಿಗಳು ಅಲ್ಲಿ ತೋರಿಸುತ್ತದೆ.
- ಬೆಳೆ ವಿಮೆ ಬೆಳೆ ಹಾನಿ ಬೆಳೆ ಪರಿಹಾರ ಮುಂತಾದ ಯೋಜನೆಗಳ ಲಾಭ ನಿಮಗೆ ಸಿಕ್ಕಿದ್ದರೆ ಇಲ್ಲಿ ತೋರಿಸುತ್ತದೆ. ಯಾವ ಹಣ ಯಾವ ದಿನಾಂಕದಂದು ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆ ಎಂಬುದನ್ನು ಇಲ್ಲಿ ಮಾಹಿತಿ ಪಡೆಯಬಹುದಾಗಿದೆ. ಈಗಾಗಲೇ ಈ ಆಪನ್ನು 50 ಲಕ್ಷಕ್ಕೂ ಹೆಚ್ಚಿನ ಜನರು ಉಪಯೋಗಿಸುತ್ತಿದ್ದಾರೆ ಮತ್ತು ಇದರ ಲಾಭವನ್ನು ಪಡೆಯುತ್ತಿದ್ದಾರೆ.
DBT App link : https://play.google.com/store/apps/details?id=com.dbtkarnataka
ಯಾವೆಲ್ಲ ಯೋಜನೆಗಳ ಮಾಹಿತಿಯನ್ನು ಈ ಅಪ್ಲಿಕೇಶನ್ ಮೂಲಕ ಪಡೆಯಬಹುದು : DBT Status App
- ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆ
- ಅನ್ನ ಭಾಗ್ಯ ಯೋಜನೆ
- ಕೃಷಿ ಬೆಂಬಲ ನಿಧಿ
- ಗೃಹಲಕ್ಷ್ಮಿ ಯೋಜನೆ, ಮುಂತಾದವು.
