ಕೊಚ್ಚಿನ್ ಶಿಪ್ ಯಾರ್ಡ್ ನೇಮಕಾತಿ, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Cochin shipyard recruitment
ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ಇತ್ತೀಚಿಗೆ ಕರ್ನಾಟಕದ ಸ್ಥಳಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲು ತನ್ನ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿರುತ್ತದೆ. ಅಧಿಕೃತ ಅಧಿಸೂಚನೆಯ ಪ್ರಕಾರ ಉಡುಪಿ ಸ್ಥಳದಲ್ಲಿ ನೇಮಕಾತಿ ಮಾಡಲಾಗುತ್ತಿದೆ. ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಸಂಸ್ಥೆಯು ಅರ್ಜಿ ಗಳನ್ನು ಆಹ್ವಾನಿಸುತ್ತಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಈ ಲೇಖನದಲ್ಲಿ ನಾವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ, ವೇತನದ ಮಾಹಿತಿ, ಅರ್ಜಿ ಶುಲ್ಕದ ಮಾಹಿತಿ, ಅರ್ಜಿ ಸಲ್ಲಿಸುವುದರ ರೀತಿ ಮುಂತಾದ ಮಾಹಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ಈ ಲೇಖನವನ್ನು ಕೊನೆಯವರೆಗೆ ಓದಿ.
ಖಾಲಿ ಇರುವ ಹುದ್ದೆಗಳ ಮಾಹಿತಿಗಳು :
ಸಂಸ್ಥೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಅಸಿಸ್ಟೆಂಟ್ ಮ್ಯಾನೇಜರ್ ಮೆಕಾನಿಕ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಎಲೆಕ್ಟ್ರಿಕಲ್ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಒಟ್ಟು ಖಾಲಿ ಇರುವ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು 2. ಒಟ್ಟು ಖಾಲಿ ಇರುವ ಅಸಿಸ್ಟೆಂಟ್ ಮ್ಯಾನೇಜರ್ ಎಲೆಕ್ಟ್ರಿಕಲ್ ಹುದ್ದೆಗಳು ಎರಡು. ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ಶೈಕ್ಷಣಿಕ ಅರ್ಹತೆಯ ಮಾಹಿತಿಗಳು :
- ಮೊದಲಿಗೆ ಅಸಿಸ್ಟೆಂಟ್ ಮ್ಯನೇಜರ್ ಮೆಕಾನಿಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯದಿಂದ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಡಿಗ್ರಿ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ಶಿಕ್ಷಣವನ್ನು ಪಾಸ್ ಆಗಿರಬೇಕು. ಈ ಶಿಕ್ಷಣ ಹೊಂದಿರುವ ಅಭ್ಯರ್ಥಿಗಳು ಅಸಿಸ್ಟೆಂಟ್ ಮ್ಯಾನೇಜರ್ ಮೆಕಾನಿಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಪಡೆಯುತ್ತಾರೆ.
- ಅಸಿಸ್ಟೆಂಟ್ ಮ್ಯಾನೇಜರ್ ಎಲೆಕ್ಟ್ರಿಕಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯದಿಂದ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಡಿಗ್ರಿ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಶಿಕ್ಷಣವನ್ನು ಪಾಸ್ ಆಗಿರಬೇಕು. ಈ ಶಿಕ್ಷಣ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅಸಿಸ್ಟೆಂಟ್ ಮ್ಯಾನಜರ್ ಎಲೆಕ್ಟ್ರಿಕಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಪಡೆಯುತ್ತಾರೆ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸಿನ ಮಿತಿಯ ಮಾಹಿತಿಗಳು :
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳ ಕನಿಷ್ಠ ವಯಸ್ಸಿನ ಮಿತಿ 18 ವರ್ಷ ಮತ್ತು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 30 ವರ್ಷ ಆಗಿರಬೇಕು. ಜನವರಿ 26ರ ಒಳಗೆ ಈ ವಯಸ್ಸು ಮೀರಿರಬಾರದು. ಈ ವಯಸ್ಸಿನ ಮಿತಿಯ ಒಳಗೆ ಬರುವ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಓಬಿಸಿ ಅಭ್ಯರ್ಥಿಗಳಿಗೆ ಅಂದರೆ ಎನ್‌ಸಿಎಲ್ ಸರ್ಟಿಫಿಕೇಟ್ ಹೊಂದಿರುವ ಅಭ್ಯರ್ಥಿಗಳಿಗೆ ಗರಿಷ್ಠ ಮೂರು ವರ್ಷಗಳ ವಯಸ್ಸಿನ ಮಿತಿಯಲ್ಲಿ ಸಡ್ಲಿಕೆಯನ್ನು ನೀಡಲಾಗಿದೆ ಇನ್ನು ಅರ್ಜಿ ಸಲ್ಲಿಸಲು ಬಯಸುವ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಗರಿಷ್ಠ ಐದು ವರ್ಷಗಳ ವಯಸ್ಸಿನ ಮಿತಿಯಲ್ಲಿ ಸಡಲಿಕ್ಕೆ ನೀಡಲಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಇದರ ಲಾಭವನ್ನು ಪಡೆಯಬಹುದಾಗಿದೆ. ಅಭ್ಯರ್ಥಿಗಳು ಓಬಿಸಿ ಕೆಟಗರಿ ಮೇಲೆ ಅರ್ಜಿ ಸಲ್ಲಿಸುವಾಗ ಎಂಸಿಎಲ್ ಸರ್ಟಿಫಿಕೇಟ್ ಹೊಂದಿರಬೇಕು. ಈ ಸರ್ಟಿಫಿಕೇಟ್ ಹೊಂದಿರುವ ಅಭ್ಯರ್ಥಿಗಳು ಮಾತ್ರ ಒಬಿಸಿ ಕೋಟಾದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಪಡೆಯುತ್ತಾರೆ. ಈ ಸರ್ಟಿಫಿಕೇಟ್ ಹೊಂದಿರದ ಅಭ್ಯರ್ಥಿಗಳು ಓಬಿಸಿ ಕೆಟಗರಿಯಲ್ಲಿ ಅರ್ಜಿ ಸಲ್ಲಿಸಲ ಅವಕಾಶ ಇರುವುದಿಲ್ಲ. ಜನರಲ್ ಕೆಟಗರಿ ಮೇಲೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಶುಲ್ಕದ ಮಾಹಿತಿಗಳು :
ಅಸಿಸ್ಟೆಂಟ್ ಮ್ಯಾನೇಜರ್ ಮೆಕಾನಿಕಲ್ ಮತ್ತು ಅಸಿಸ್ಟೆಂಟ್ ಮ್ಯಾನೇಜ್ ಎಲೆಕ್ಟ್ರಿಕಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಯಾವುದೇ ಸರ್ಕಾರಿ ಶುಲ್ಕ ಇರುವುದಿಲ್ಲ. ಇನ್ನು ಅರ್ಜಿ ಸಲ್ಲಿಸಲು ಬಯಸುವ ಉಳಿದ ಕೆಟ್ಟಗರಿಯ ಎಲ್ಲಾ ಅಭ್ಯರ್ಥಿಗಳಿಗೆ ಗರಿಷ್ಠ ಒಂದು ಸಾವಿರ ರೂಪಾಯಿಗಳ ಅರ್ಜಿ ಶುಲ್ಕ ಇರುತ್ತದೆ. ಅಭ್ಯರ್ಥಿಗಳು ಅರ್ಜಿ ನಮೂನೆ ಭರ್ತಿ ಮಾಡಿದ ನಂತರ ಆನ್ಲೈನ್ ಮೂಲಕ ಸರಕಾರಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಂಸ್ಥೆಯ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ನೋಡಿ.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮಾಹಿತಿಗಳು :
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲನೆಯ ಹಂತದಲ್ಲಿ ಆಬ್ಜೆಕ್ಟಿವ್ ಟೈಪ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ಹಂತದಲ್ಲಿ ಡಿಸ್ಕ್ರಿಪ್ಟಿವ್ ಟೈಪ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ನಂತರ ಮುಂದಿನ ಹಂತದಲ್ಲಿ ಗ್ರೂಪ್ ಡಿಸ್ಕಶನ್ ನಡೆಸಲಾಗುತ್ತದೆ. ಕೊನೆಯ ಹಂತದಲ್ಲಿ ಪರ್ಸನಲ್ ನೇರ ಸಂದರ್ಶನ ಮುನ್ನಡೆಸಲಾಗುತ್ತದೆ. ಈ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂಸ್ಥೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಸೂಕ್ತ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಾಗುತ್ತದೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಕ್ರಮಗಳು :
- ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳು ಮೊದಲಿಗೆ ಸಂಸ್ಥೆಯ ಕೊಚ್ಚಿನ್ ಶಿಪ್ ಯಾರ್ಡ್ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕು. ನಂತರ ಇತ್ತೀಚಿಗೆ ಆಗಿರುವ ಅಧಿಕೃತ ಅಧಿಸೂಚನೆಯ ನೋಟಿಫಿಕೇಶನ್ ಅನ್ನು ಕಾಣಬಹುದು.
- ಅಧಿಕೃತ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಸಂಪೂರ್ಣವಾಗಿ ಓದಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಅರ್ಹ ಇದ್ದರೆ ನಂತರ ಅಪ್ಲೈ ಬಟನ್ ಒತ್ತುವ ಮೂಲಕ ಆನ್ಲೈನ್ ಮೂಲಕ ಅರ್ಜಿ ಫಾರ್ಮ್ ಅನ್ನು ಫಿಲ್ ಮಾಡಬೇಕು.
- ಅಭ್ಯರ್ಥಿಗಳು ಮೊದಲ ಬಾರಿ ಅರ್ಜಿ ಸಲ್ಲಿಸುತ್ತಿದ್ದರೆ ರಿಜಿಸ್ಟ್ರೇಷನ್ ಬಟನ್ ಅನ್ನು ಒತ್ತುವ ಮೂಲಕ ಅಕೌಂಟ್ ಕ್ರಿಯೆಟ್ ಮಾಡಬೇಕು.
- ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪು ಅಥವಾ ಸುಳ್ಳು ಮಾಹಿತಿಗಳನ್ನು ಭರ್ತಿ ಮಾಡಿದರೆ ಅಂತ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
- ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ಕೊನೆಯ ಹಂತದಲ್ಲಿ ಎಲ್ಲಾ ಮಾಹಿತಿಗಳು ಸರಿಯಾಗಿದ್ದರೆ ಸಬ್ಮಿಟ್ ಬಟನ್ ಅನ್ನು ಒತ್ತಬೇಕು. ನಂತರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇದ್ದರೆ ಆನ್ಲೈನ್ ಮೂಲಕ ಪಾವತಿ ಮಾಡಬೇಕು.
- ಕೊನೆಗೆ ಅಭ್ಯರ್ಥಿಗಳು ತಮ್ಮ ಭವಿಷ್ಯತ್ತಿನ ಉಪಯೋಗಕ್ಕಾಗಿ ಅರ್ಜಿ ನಮೂನೆಯ ಪಿಡಿಎಫ್ ಪ್ರಿಂಟೌಟ್ ತೆಗೆದುಕೊಳ್ಳಬೇಕು.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳ ಮಾಹಿತಿ :
ಕೊಚ್ಚಿನ್ ಶಿಪ್ ಯಾರ್ಡ್ ಸಂಸ್ಥೆ ಬಿಡುಗಡೆ ಮಾಡಿರುವ ಅಧಿಕೃತ ಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 26 ಆಗಿರುತ್ತದೆ. ಆಸಕ್ತಿ ಇರುವ ಅಭ್ಯರ್ಥಿಗಳು ಈ ದಿನಾಂಕದ ಮುನ್ನ ತಮ್ಮ ಅರ್ಜಿಯನ್ನು ಸಲ್ಲಿಸಲಾವಕಾಶ ಇರುತ್ತದೆ. ಈ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಆದ್ದರಿಂದ ಆಸಕ್ತಿ ಇರುವ ಅಭ್ಯರ್ಥಿಗಳು ಸಂಸ್ಥೆಯು ನಿಗದಿಪಡಿಸಿರುವ ಕೊನೆಯ ದಿನಾಂಕದ ಮುನ್ನ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ಡೈಲಿ ಕನ್ನಡ ನ್ಯೂಸ್ ಯಾವುದೇ ರೀತಿಯ ಜಾಬ್ ಗಳನ್ನು ನೀಡುವುದಿಲ್ಲ. ನಮಗೂ ಸರಕಾರಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ನಾವು ಕೇವಲ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯ ಸುದ್ದಿಗಳನ್ನು ಮಾತ್ರ ಪಬ್ಲಿಶ್ ಮಾಡುತ್ತೇವೆ. ನಾವು ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಫೇಕ್ ಸುದ್ದಿಗಳನ್ನು ಪಬ್ಲಿಶ್ ಮಾಡುವುದಿಲ್ಲ. ಕೇವಲ ನಿಜ ನಿಖರವಾದ ಸುದ್ದಿಗಳನ್ನು ಮಾತ್ರ ಪಬ್ಲಿಶ್ ಮಾಡುತ್ತೇವೆ. ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸುವ ಮುನ್ನ ಸಂಸ್ಥೆ ಬಿಡುಗಡೆ ಮಾಡಿರುವ ಅಧಿಕೃತ ನೋಟಿಫಿಕೇಶನ್ ಪಿಡಿಎಫ್ ಅನ್ನು ಸಂಪೂರ್ಣವಾಗಿ ಓದಿಯೇ ನಂತರವೇ ತಮ್ಮ ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ತೊಂದರೆಗಳನ್ನು ಅನುಭವಿಸಿದರೆ ಅದಕ್ಕೆ ನಾವು ಜವಾಬ್ಧರಾಗಿರುವುದಿಲ್ಲ. ಆದ್ದರಿಂದ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಓದಿ ನಂತರವೇ ತಮ್ಮ ಅರ್ಜಿಯನ್ನು ಸಲ್ಲಿಸಿ.
ನಮ್ಮ ಡೈಲಿ ಕನ್ನಡ ನ್ಯೂಸ್ ವೆಬ್ ಸೈಟ್ ನಲ್ಲಿ ನಾವು ಪ್ರತಿದಿನ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಪ್ರತಿದಿನ ಜಾಬ್ ಅಪ್ಡೇಟ್ ಪಡೆಯಲು ಬಯಸುವ ಅಭ್ಯರ್ಥಿಗಳು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಬಹುದು ಮತ್ತು ಜಾಬ್ ಅಪ್ಡೇಟಿಗೆ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪನ್ನು ಜಾಯಿನ್ ಆಗಬಹುದು. ಈ ಲೇಖನ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಲೇಖನ ನಿಮಿಗಿಷ್ಟವಾಗಿದ್ದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಈ ಲೇಖನ ಓದಿದಕ್ಕಾಗಿ ಧನ್ಯವಾದಗಳು.
News orginal source : https://cochinshipyard.in/Careers
