Chandraya 3 – ನಾಳೆ ನಡೆಯುವ ಲ್ಯಾಂಡಿಂಗ್ ಪ್ರಕ್ರಿಯೆ ಹೇಗಿರಲಿದೆ ?
Chandraya 3 – ನಾಳೆ ನಡೆಯುವ ಲ್ಯಾಂಡಿಂಗ್ ಪ್ರಕ್ರಿಯೆ ಹೇಗಿರಲಿದೆ ? ಭಾರತದ ಇಸ್ರೋ ಸಂಸ್ಥೆ ಕೈಗೊಂಡಿರುವ ಚಂದ್ರಯಾನ ಮೂರು ಕೊನೆಯ ಹಂತವನ್ನು ತಲುಪಿದೆ. ನಾಳೆ ಅಂದರೆ ಅಗೋಸ್ಟ್ 23ರಂದು ವಿಕ್ರಂ ಲ್ಯಾಂಡರ್ ಅನ್ನು ಚಂದ್ರನ ಅಂಗಳಕ್ಕೆ ಇಳಿಸುವ ಪ್ರಯತ್ನವನ್ನು ಇಸ್ರೋ ಮಾಡಲಿದೆ. ಈ ಹಿಂದೆ ಹಮ್ಮಿಕೊಂಡಿದ್ದ ಚಂದ್ರನ ಎರಡು ಕೊನೆಯ ಹಂತದಲ್ಲಿ ವಿಫಲ ಆಗಿತ್ತು. ಹೀಗಾಗಿ ಚಂದ್ರಯಾನ ಮೂರರ ಸಾಫ್ಟ್ ಲ್ಯಾಂಡಿಂಗ್ ಇಸ್ರೋಗೆ ದೊಡ್ಡ ಸವಾಲಾಗಿದೆ.
ಇದು ನಿರ್ಣಾಯಕ ಹಂತವಾಗಿರುತ್ತದೆ. ಭಾರತದ ಚಂದಿರನ ಮೇಲೆ ಸಾಫ್ಟ್ ಲೈನಿಂಗ್ ಮಾಡುವ ಪ್ರಯತ್ನವನ್ನು ಮಾಡುತ್ತಿದೆ. ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆದ ನಂತರ ಪ್ರಗ್ಯಾನ್ ರೋವರ್ ಚಂದ್ರನ ಅಂಗಳದಲ್ಲಿ ಇಳಿದು ಹಲವಾರು ಚಮತ್ಕಾರಗಳನ್ನು ಮಾಡಲು ಮುಂದಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಇಡೀ ಭಾರತ ಕಾದು ಕುಳಿತಿವೆ. ಒಂದು ವೇಳೆ ಚಂದ್ರನ ಮೇಲ್ಮೈ ಮೇಲೆ ಅದು ಕೂಡ ಚಂದ್ರನ ದಕ್ಷಿಣ ಧ್ರುವದಲ್ಲಿ ನಮ್ಮ ನೌಕೆಲ್ಯಾಂಡ್ ಆದರೆ ಇದು ಭಾರತದ ಪಾಲಿಗೆ ಸುವರ್ಣ ಯುಗವಾಗಲಿದೆ.
ನಾಳೆ ನಡೆಯುವ ಲ್ಯಾಂಡಿಂಗ್ ಪ್ರಕ್ರಿಯೆ ಹೇಗಿರಲಿದೆ ?
Chandraya 3 – ನಾಳೆ ನಡೆಯುವ ಲ್ಯಾಂಡಿಂಗ್ ಪ್ರಕ್ರಿಯೆ ಹೇಗಿರಲಿದೆ ? ಚಂದ್ರಯಾನ ಮೂರು ಜುಲೈ 14ರಂದು ನೌಕೆಯನ್ನು ಹೊತ್ತು ರಾಕೆಟ್ ಸ್ಪೇಸಿಗೆ ತೆರಳಿತ್ತು. ನಂತರ ಚಂದ್ರನ ಕಕ್ಷೆಯಲ್ಲಿ ಸೇರುವಲ್ಲಿ ಯಶಸ್ವಿಯಾಗಿತ್ತು. ಭೂಮಿಯಿಂದ ಸರಿಸುಮಾರು 3.84 ಲಕ್ಷ km ದೂರವನ್ನು ಕ್ರಮಿಸಿ ಚಂದ್ರನ ಕಕ್ಷೆಗೆ ಸೇರಿತ್ತು. ಇದು ಈಗಾಗಲೇ ಭೂಮಿಗೆ ಹಲವಾರು ಫೋಟೋಗಳನ್ನು ಕಳುಹಿಸಿದೆ. ಬೆಂಗಳೂರಿನ ಇಸ್ರೋ ಮಾನಿಟರ್ ಕಛೇರಿಯಿಂದ ಇದರ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
Chandrayana 3 – ಚಂದ್ರಯಾನ 3 ಬಗ್ಗೆ ವ್ಯಂಗ್ಯವಾಡಿದ ಪ್ರಕಾಶ್ ರಾಜ್
ಮೊದಲಿಗೆ ವಿಕ್ರಂ ಲ್ಯಾಂಡರ್ ಎತ್ತರದಿಂದ 25 ಕಿ.ಮೀ ಎತ್ತರದಿಂದ ಚಂದಿರನ ಮೇಲ್ಬೈಗೆ ಇಳಿಸಲಾಗುತ್ತದೆ. ಇದು ಪ್ರತಿ ಸೆಕೆಂಡಿಗೆ 1.68 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಅಂದರೆ ಇದು ಸರಿಸುಮಾರು ಗಂಟೆಗೆ 6000 ಕಿಲೋಮೀಟರ್ ವೇಗದಷ್ಟು ಸ್ಪೀಡಲ್ಲಿ ಕೆಳಗೆ ಇಳಿಯುತ್ತದೆ. ಇಳಿಯುವ ಸಮಯದಲ್ಲಿ ಲ್ಯಾಂಡರ್ ನಲ್ಲಿರುವ ಇಂಜಿನ್ ಗಳು ಆನ್ ಆಗಿ ವೇಗವನ್ನು ಕಡಿಮೆ ಮಾಡುವ ಪ್ರಯತ್ನವನ್ನು ಮಾಡುತ್ತದೆ. ನಂತರ ಮುಂದಿನ 11 ನಿಮಿಷಗಳ ಕಾಲ ನಡೆಯುವ ವೇಗವನ್ನು ಕಡಿಮೆ ಮಾಡುವ ಪ್ರಕ್ರಿಯೆಯನ್ನು ರಫ್ ಬ್ರೇಕಿಂಗ್ ಎಂದು ಕರೆಯುತ್ತೇವೆ.

ನಂತರ ಮತ್ತೊಂದು ಸೂಕ್ಷ್ಮ ಬ್ರೇಕಿಂಗ್ ಅಂತವನ್ನು ಮಾಡಲಾಗುತ್ತದೆ. ನಂತರ ಕೊನೆಗೆ ಲ್ಯಾಂಡರ್ ಶೂನ್ಯವಾಗುತ್ತದೆ. ಈ ಸಮಯದಲ್ಲಿ ವಿಕ್ರಂ ಲ್ಯಾಂಡರ್ 150 ಮೀಟರ್ ಎತ್ತರದಲ್ಲಿ ಇರುತ್ತದೆ. ನಂತರ ಇಳಿಯಲು ಬೇಕಾಗಿರುವ ಸರಿಯಾದ ಸ್ಥಳವನ್ನು ಹುಡುಕುತ್ತದೆ. ನಂತರ ಕೊನೆಯ ಹಂತದಲ್ಲಿ ಚಂದಿರನ ಮೇಲ್ಮೈ ಮೇಲೆ ಉಳಿಯುತ್ತಿದೆ. ನಿಗದಿತ ಸಮಯದ ನಂತರ ಲ್ಯಾಂಡರ್ ಒಳಗಿನಿಂದ ರೋವರ್ ಹೊರಗೆ ಬಂದು ತನ್ನ ಕಾರ್ಯವನ್ನು ನಡೆಸುತ್ತದೆ. ಇದು ಒಟ್ಟು 14 ದಿನಗಳವರೆಗೆ ತನ್ನ ಕಾರ್ಯವನ್ನು ನಡೆಸುತ್ತದೆ.
Chandraya 3 – ನಾಳೆ ನಡೆಯುವ ಲ್ಯಾಂಡಿಂಗ್ ಪ್ರಕ್ರಿಯೆ ಹೇಗಿರಲಿದೆ ? ಒಂದು ವೇಳೆ ಈ ಮೇಲೆ ನೀಡಿದೆ ಎಲ್ಲಾ ಅಂಶಗಳು ಸರಿಯಾಗಿ ನಡೆದರೆ ಚಂದಿರನ ಮೇಲೆ ಸಾಫ್ಟ್ ಲೈನಿಂಗ್ ಮಾಡಿದ ವಿಶ್ವದ ನಾಲ್ಕನೇ ದೇಶವಾಗುತ್ತದೆ ದೇಶವಾಗುತ್ತದೆ. ಈ ಹಿಂದೆ ಅಮೆರಿಕ ರಷ್ಯ ಚೈನಾ ಮತ್ತು ಫ್ರಾನ್ಸ್ ಗಳು ಈ ಕಾರ್ಯವನ್ನು ನಡೆಸಿದೆ. ಹಿಂದೆ ಭಾರತ ಚಂದ್ರಯಾನ 2 ಮಾಡಿತ್ತು. ಕೊನೆಯ ಹಂತದಲ್ಲಿ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸುವ ಸಮಯದಲ್ಲಿ ವೈಫಲ್ಯವನ್ನು ಎದುರಿಸಬೇಕಾಗಿತ್ತು. ಇದರಿಂದ ಭಾರತದ ಎಲ್ಲಾ ನಾಗರಿಕರು ಬೇಸರವನ್ನು ವ್ಯಕ್ತಪಡಿಸಿದ್ದರು. ಆದರೆ ಇಸ್ರೋ ಪ್ರಕಾರ ಚಂದ್ರಯಾನ 2 ಅಲ್ಲಿ ಶೇಕಡ 95 ರಷ್ಟು ಸಫಲತೆಯನ್ನು ಪಡೆದಿದ್ದರೆ ಇನ್ನುಳಿದ ಕೊನೆಯ ಐದು ಶೇಕಡದಷ್ಟು ವಿಫಲತೆಯನ್ನು ಎದುರಿಸಬೇಕಾಯಿತು. ಆದರೆ ಚಂದ್ರಯಾನ 2 ಆರ್ಬಿಟರ್ ಈಗಲೂ ಚಂದ್ರನ ಕಕ್ಷೆಯಲ್ಲಿ ತಿರುಗುತ್ತಿದೆ ಚಂದ್ರಯಾನದ ಮೂರು ವಿಷನ್ ನಲ್ಲಿ ಇದರ ಲಾಭವನ್ನು ಪಡೆಯುತ್ತಿದ್ದಾರೆ. ವಿಕ್ರಂ ಲ್ಯಾಂಡರ್ ಟು ವೇ ಕಮ್ಯುನಿಕೇಷನ್ ಅನ್ನು ಪಡೆದುಕೊಂಡಿದೆ. ನಾಳೆ ನಡೆಯುವ ಕೊನೆಯ ಹಂತದಲ್ಲಿಯೂ ಇಸ್ರೋ ಸಫಲತೆಯನ್ನು ಕಾಣಲಿ ಎಂಬುದನ್ನು ನಾವು ತಿಳಿಸುತ್ತೇವೆ.
