ನಮಸ್ಕಾರ ಪ್ರಿಯ ಓದುಗರೇ ಇಂದು ನಾವು ವಿದ್ಯಾರ್ಥಿಗಳಿಗೆ ಸಿಹಿಸುದ್ದಿಯಾದ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ನೀಡಲು ಬಯಸುತ್ತಿದ್ದೇವೆ. ಈಗಾಗಲೇ ಹಲವಾರು ವಿದ್ಯಾರ್ಥಿ ವೇತನಗಳು ಜಾರಿಯಾಗುತ್ತಲೆ ಇವೆ.ಅದೇ ತರಹ ಇಂದು ನಾವು ತಿಳಿಸಲು ಇಚ್ಛಿಸುವ ವಿದ್ಯಾರ್ಥಿ ವೇತನದ ಬಗ್ಗೆ ಹಲವರಿಗೆ ತಿಳಿದಿಲ್ಲ ಆದರೆ ಇದರಿಂದ ಹಲವಾರು ವಿದ್ಯಾರ್ಥಿಗಳಿಗೆ ತುಂಬಾನೇ ಅವಶ್ಯಕವಾಗಿದೆ ಹಾಗಾಗಿ ಬನ್ನಿ ಅದು ಏನೆಂದು ತಿಳಿಯೋಣ.ಮತ್ತು ಈ ಒಂದು ವಿದ್ಯಾರ್ಥಿ ವೇತನಕ್ಕೆ ಹೇಗೆ ಅರ್ಜಿ ಸಲ್ಲಿಸುವುದರ ಬಗ್ಗೆ ತಿಳಿಸಿಕೊಡುತ್ತವೆ.
ಹಲವಾರು ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ವರ್ಗದವರಾಗಿದ್ದು ತಮ್ಮ ವಿದ್ಯಾಭ್ಯಾಸವನ್ನು ಕೊನೆಗೊಳಿಸುವ ಪರಿಸ್ಥಿಯಲ್ಲಿ ಇರುತ್ತಾರೆ. ಅಂತಹ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಒದಗಿಸಲು ಭಾರತ ಸರ್ಕಾರ ನಿರ್ಧರಿಸಿದೆ ಹಾಗಾಗಿಯೇ NSP ಎಂಬ ನವೀನ ವಿದ್ಯಾರ್ಥಿ ವೇತನವನ್ನು ಜಾರಿಗೊಳಿಸಿದೆ.ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಪ್ರಸ್ತುತ NSP ಪೋರ್ಟಲ್ ವೆಬ್ ಸೈಟ್ ಗೆ ಬೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
NSP ವಿದ್ಯಾರ್ಥಿವೇತನ ವಿದ್ಯಾರ್ಥಿಗಳ ಬೋಧನಾ ಶುಲ್ಕ, ಹಾಸ್ಟೆಲ್ ಶುಲ್ಕ ಮತ್ತು ಪುಸ್ತಕ ವೆಚ್ಚ ಮತ್ತು ಇತರೆ ಹಣಕಾಸಿನ ನೆರವನ್ನು ನೀಡಲು ಸಾದ್ಯವಾಗುತ್ತದೆ.ವಿದ್ಯಾರ್ಥಿಯ ಪ್ರಸ್ತುತ ವಿದ್ಯಾಸಂಸ್ಥೆ , ಕೋರ್ಸ್ ಆಧಾರದ ಮೇಲೆ ಈ ಒಂದು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
ಹಾಗಾದರೆ ಬನ್ನಿ ಈ ಒಂದು ವಿದ್ಯಾರ್ಥಿ ವೇತನವನ್ನು ಪಡೆಯಲು ಬೇಕಾಗಿರುವ ಅರ್ಹತೆಗಳನ್ನು ನೋಡೋಣ;
- ಅಭ್ಯರ್ಥಿ ಭಾರತದ ಪ್ರಜೆಯಾಗಿರಬೇಕು.
- ವಿದ್ಯಾರ್ಥಿವೇತನ 11 ನೆ ತರಗತಿ 18 ವರ್ಷಕ್ಕಿಂತ ಕಡಿಮೆ ಮತ್ತು ಸ್ನಾತಕೋತ್ತರ ಪದವೀಧರರಿಗೆ 30 ವರ್ಷ ಮೀರಿರಬಾರದು.
- ಪ್ರಮುಖವಾಗಿ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 11 ತರಗತಿ ವಿದ್ಯಾರ್ಥಿಗಳಿಗೆ 6 ಲಕ್ಷಕ್ಕಿಂತ ಒಳಗೆ ಇರಬೇಕು.ಮತ್ತು ಸ್ನಾತಕೋತ್ತರ ಪದವೀಧರರ ಕುಟುಂಬ ವಾರ್ಷಿಕ ಆದಾಯ ರೂ.8 ಲಕ್ಷಕ್ಕಿಂತ ಕಡಿಮೆ ಆಗಿರಬೇಕು.
- ವಿದ್ಯಾರ್ಥಿ ವೇತನ ಪಡೆಯಲು ಬಯಸುವ ವಿದ್ಯಾರ್ಥಿ ಯು 12 ನೆ ತರಗತಿಯಲ್ಲಿ ಕನಿಷ್ಠ ಶೇಕಡಾ 60% ರಷ್ಟು ಅಂಕ ಗಳಿಸಿರಬೇಕು. ಮತ್ತು ಪದವೀಧರರು ಶೇಕಡಾ 55% ರಷ್ಟು ಅಂಕದಿಂದ ತೇರ್ಗಡೆಯಾಗಿರಬೇಕು.
- ಭಾರತದಲ್ಲಿ ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯ ಅಥವಾ ಮಂಡಳಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿದ್ದಾರೆ.
- 11 ನೆ ತರಗತಿ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸಬುದಾಗಿದೆ.ಅರ್ಹತೆಗಳ ಜೊತೆಗೆ ಕೆಲವೊಂದು ಪ್ರಮುಖ ದಾಖಲೆಗಳನ್ನು ನೀವು ಸಲ್ಲಿಸಬೇಕಾಗುತ್ತದೆ
ವಿದ್ಯಾರ್ಥಿವೇತನ ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಹೀಗಿವೆ ;
- ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ವಿದ್ಯಾರ್ಥಿಯ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
- ವಿದ್ಯಾರ್ಥಿ ಜಾತಿ ಪ್ರಮಾಣ ಪತ್ರ
- ವಿದ್ಯಾರ್ಥಿಯ ಆದಾಯ ಪ್ರಮಾಣ ಪತ್ರ ವಿದ್ಯಾಸಂಸ್ಥೆ / ಬೋನಾಫೈಡ್ ಪ್ರಮಾಣ ಪತ್ರ
- ವಿದ್ಯಾಸಂಸ್ಥೆ/ ಶುಲ್ಕ ರಶೀದಿ
- ವಿದ್ಯಾರ್ಥಿಯ ಮೊಬೈಲ್ ಸಂಖ್ಯೆ
- ಇಮೇಲ್ ಐಡಿ
NSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ
- ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಮೊದಲಿಗೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗಿದೆ.
- ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ನೀವು ಹೊಸತಾದ ಖಾತೆಯನ್ನು ರಚಿಸಬೇಕಾಗಿದೆ.
- ನೋಂದಣಿ ಪ್ರಕ್ರಿಯೆ ಅದ ನಂತರ ನೀವು ಮರು ಮುಖಪುಟಕ್ಕೆ ತೆರಳಿದಾಗ ನಿಮಗೆ ಹೊಸ ನೋಂದಣಿ ಆಯ್ಕೆಯನ್ನು ಬಳಸಿ.
- ನಿಮಗೆ ಅರ್ಜಿ ನಮೂನೆಯು ತೆರೆದುಕೊಳ್ಳುತ್ತದೆ.ಅದನ್ನು ಸರಿಯಾದ ಮತ್ತು ಸ್ಪಷ್ಟವಾದ ಮಾಹಿತಿ ನೀಡುವ ಮೂಲಕ ಭರ್ತಿ ಮಾಡಿ .
- ಆನಂತರ ಬೇಕಾಗಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ‘ ಅರ್ಜಿ ಸಲ್ಲಿಸಿ ‘ ಬಟನ್ ಅನ್ನು ಒತ್ತಿ ಅದನ್ನು ಒತ್ತುವ ಮೂಲಕ ನೀವು ಅರ್ಜಿ ಪ್ರಕೃತಿಯನ್ನು ಪೂರ್ಣಗೊಳಿಸುತ್ತಿರ.
- ಪ್ರಮುಖವಾಗಿ ನಿಮ್ಮ ಅರ್ಜಿ ನಮೂನೆಯನ್ನು ಸಂಖ್ಯೆಯನ್ನು ಬರೆದಿಟ್ಟುಕೊಳ್ಳಬೇಕು ಇದರ ಮೂಲಕ ನೀವು ನಿಮ್ಮ ಅರ್ಜಿ ಸ್ಥಿತಿಯನ್ನು ನೀವು ಖುದ್ದಾಗಿ ಪರಿಶೀಲಿಸಬಹುದು.
- ಅರ್ಜಿದಾರರಿಗೆ ಅಭಿನಂದನೆಗಳು.
ಈ ಒಂದು ಮಾಹಿತಿಯು ಹಲವಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಹಾಗಾಗಿ ನೀವು ನಿಮ್ಮ ಸುತ್ತಮುತ್ತಲಿನ ಅನೇಕ ವಿದ್ಯಾರ್ಥಿಗಳಿಗೆ ಈ ಒಂದು ಮಾಹಿತಿಯನ್ನು ಹಂಚಿಕೊಳ್ಳಿ ಮತ್ತು ನಮ್ಮ ಬ್ಲಾಗ್ ಗೆ ಪ್ರೋತ್ಸಾಹ ನೀಡಿ. News sourse – official government website.
