BMTC recruitment 2024 – BMTC ನೇಮಕಾತಿ ಕರ್ನಾಟಕ 2024
ಡೈಲಿ ಕನ್ನಡ ನ್ಯೂಸ್ ಗೆ ಸ್ವಾಗತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿರುವ BMTC ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡುತ್ತೇವೆ. ಸಂಸ್ಥೆಯ ಅಧಿಕೃತ ಅಧಿ ಸೂಚನೆಯಂತೆ ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲವೃಂದಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗುತ್ತಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದೆ. ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಲೇಖನದಲ್ಲಿ ನಾವು ಈ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ಆದ್ದರಿಂದ ಕೊನೆಯವರೆಗೆ ಓದಿ.
|
ಹುದ್ದೆಗಳ ವಿವರಗಳು :
ಸಂಸ್ಥೆ ಬಿಡುಗಡೆ ಮಾಡಿರುವ ಅಧಿಕೃತ ಪಾಲಿಸೂಚನೆಯ ಪ್ರಕಾರ ಒಟ್ಟು 2286 ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಜಾತಿಗಳುಸಾರವಾಗಿ ಇರುವ ನೇಮಕಾತಿಯ ಮಾಹಿತಿಯನ್ನು ಮೇಲೆ ಟೇಬಲ್ ನಲ್ಲಿ ನೀಡಿದ್ದೇವೆ ನೋಡಬಹುದಾಗಿದೆ. ಸಾಮಾನ್ಯ ಅಭ್ಯರ್ಥಿಗಳು ಮಹಿಳಾ ಮೀಸಲು ಮಾಜಿ ಸೈನಿಕರು ಯೋಜನಾ ನಿರಾಶ್ರಿತರು ಗ್ರಾಮೀಣ ಮೀಸಲು ಕನ್ನಡ ಮಾಧ್ಯಮ ತೃತೀಯಲಿಂಗ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ನೀಡಲಾಗಿದೆ.
ಬೇಕಾಗಿರುವ ಶೈಕ್ಷಣಿಕ ಅರ್ಹತೆಯ ಮಾಹಿತಿಗಳು :
ಬಿ ಎಂ ಟಿ ಸಿ ಹೊಸ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯದಿಂದ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಪಿಯುಸಿ ಯಾವುದೇ ಮಾಧ್ಯಮ ಅಂದರೆ ಆರ್ಟ್ಸ್ ಕಾಮರ್ಸ್ ಸೈನ್ಸ್ ನಲ್ಲಿ ಪಾಸ್ ಆಗಿರಬೇಕು ಅಥವಾ 10 ಪ್ಲಸ್ 2 ICSE ಅಥವಾ ಸಿಬಿಎಸ್‌ಸಿಯಲ್ಲಿ ಉತ್ತೀರರಾಗಿರಬೇಕು ಅಥವಾ ಅಭ್ಯರ್ಥಿಗಳು ಯಾವುದೇ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಮೂರು ವರ್ಷಗಳ ಡಿಪ್ಲೋಮೋ ಪದವಿಯಲ್ಲಿ ಉತ್ತೀರ ರಾಗಿರಬೇಕು. ಇದರ ಜೊತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಬಳಿ ಮೋಟಾರ್ ವಾಹನ ನಿರ್ವಾಹಕ ಪರವಾನಿಗೆ ಮತ್ತು ಬ್ಯಾಡ್ಜ್ ಅನ್ನು ಹೊಂದಿರಬೇಕು. ಈ ಮೇಲೆ ನೀಡಿರುವ ವಿದ್ಯಾಭ್ಯಾಸ ಹೊಂದಿರುವ ಅಭ್ಯರ್ಥಿಗಳು ಮಾತ್ರ ತಮ್ಮ ಅರ್ಜಿಯನ್ನು ಸಲ್ಲಿಸಲು ಅವಕಾಶ ಪಡೆಯುತ್ತಾರೆ. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳ ಬಳಿ ನಿರ್ವಾಹಕ ಪರವಾನಿಗೆ ಹೊಂದಿರುವುದು ಕಡ್ಡಾಯವಾಗಿದೆ ಇದು ಇಲ್ಲದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಾವಕಾಶ ಪಡೆಯುವುದಿಲ್ಲ.
ಬೇಕಾಗಿರುವ ಫಿಸಿಕಲ್ ಮಾಹಿತಿಗಳು :
ಈ ಮೇಲೆ ನೀಡಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪುರುಷ ಅಥವಾ ಪುರುಷ ತೃತೀಯಲಿಂಗ ಅಭ್ಯರ್ಥಿಗಳ ಎತ್ತರ 160cm ಹೊಂದಿರಬೇಕು. ಮಹಿಳಾ ಅಭ್ಯರ್ತಿಗಳು ಅಥವಾ ಮಹಿಳಾ ತೃತೀಯ ಲಿಂಗ ಅಭ್ಯರ್ಥಿಗಳ ಎತ್ತರ 150 ಸೆಂಟಿಮೀಟರ್ ಹೊಂದಿರಬೇಕು. ಈ ಮೇಲೆ ನೀಡಿರುವ ಎತ್ತರ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲ ಅವಕಾಶ ಇರುತ್ತದೆ. ವೆರಿಫಿಕೇಶನ್ ಮಾಡುವ ಸಮಯದಲ್ಲಿ ಈ ಮೇಲೆ ನೀಡಿರುವ ನಿಗದಿತ ಎತ್ತರ ಹೊಂದಿರದ ಅಭ್ಯರ್ಥಿಗಳನ್ನು ಅನರ್ಹ ಅಭ್ಯರ್ಥಿಗಳೆಂದು ಪರಿಗಣಿಸಲಾಗುತ್ತದೆ. ಆದರಿಂದ ಮೇಲೆ ಇರುವ ಮಾಹಿತಿಯನ್ನು ನೋಡಿ ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸಿನ ಮಿತಿಯ ಮಾಹಿತಿಗಳು :
ಬಿಎಂಟಿಸಿ ಹೊಸ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಆಗಿರುತ್ತದೆ ಮತ್ತು ಗರಿಷ್ಠ ವಯಸ್ಸು 35 ವರ್ಷ ಆಗಿದೆ. 2A 2B 3A 3B ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 38 ವರ್ಷ ಆಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ1 ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 40 ವರ್ಷ ಆಗಿದೆ. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 45 ವರ್ಷ ಆಗಿರುತ್ತದೆ. ಈ ವಯಸ್ಸಿನ ಮಿತಿಯ ಒಳಗೆ ಬರುವ ಅಭ್ಯರ್ಥಿಗಳು ಮಾತ್ರ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ.. ವೆರಿಫಿಕೇಶನ್ ಮಾಡುವ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ಜಾತಿ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ. ಕರ್ನಾಟಕ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳ ಇಲಾಖೆಗಳ ಸೇವಾ ವರ್ಷಗಳಿಗೆ ಅನುಗುಣವಾಗಿ ಅರ್ಜಿ ಸಲ್ಲಿಸುವ ವರಗೆ ಗರಿಷ್ಠ ವಯಸ್ಸು 45 ವರ್ಷ ಮೀರಿರಬಾರದು.
ವೇತನದ ಮಾಹಿತಿಗಳು :
ಈ ಮೇಲಿನ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷಗಳ ಕೆಲಸದ ಮೇಲೆ ತರಬೇತಿಯನ್ನು ನಡೆಸಲಾಗುತ್ತದೆ. ಈ ಸಮಯದಲ್ಲಿ ಅಭ್ಯರ್ಥಿಗಳಿಗೆ ಮಾಸಿಕವಾಗಿ 9100 ರೂಪಾಯಿಗಳ ವೇತನವನ್ನು ನೀಡಲಾಗುತ್ತದೆ. ನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ 18 ಸಾವಿರದಿಂದ ಇಪ್ಪತ್ತೈದು ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ. ಎರಡು ವರ್ಷಗಳ ಕಾಲ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆಯಲ್ಲಿ ತೃಪ್ತಿಕರವಾಗಿ ಪೂರೈಸಿದಲ್ಲಿ ಅಂತಹ ಅಭ್ಯರ್ಥಿಗಳನ್ನು ಸದರಿ ಹುದ್ದೆಯ ಸೇವೆಯಲ್ಲಿ ಕಾಯಂಗಡಿಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
- ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
- ಅಭ್ಯರ್ಥಿಗಳ ಮೊದಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ.
- ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಲ ಅವಕಾಶ ನೀಡಲಾಗಿದೆ.
- ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಸಂಸ್ಥೆಯು ನಿಗದಿಪಡಿಸಿದ್ದ ಗಾತ್ರದ ಅನುಸಾರ ಅಭ್ಯರ್ಥಿಗಳ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಕಪ್ಪು ಬಣ್ಣದ ಪೆನ್ನಿನಲ್ಲಿ ಮಾಡಿರುವ ಸಿಗ್ನೇಚರ್ ಫೋಟೋವನ್ನು ಸ್ಕ್ಯಾನ್ ಮಾಡಿ ಅರ್ಜಿ ಸಲ್ಲಿಸುವಾಗ ಅಪ್ಲೋಡ್ ಮಾಡಬೇಕು.
- ಒಮ್ಮೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ತಿದ್ದುಪಡಿ ಅಥವಾ ಮಾಹಿತಿ ಸೇರ್ಪಡೆ ಮಾಡುವುದನ್ನು ಪರಿಗಣಿಸಲಾಗುವುದಿಲ್ಲ ಆದ್ದರಿಂದ ಸರಿಯಾಗಿ ತಮ್ಮ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ನೀಡಿರುವ ವಯೋಮಿತಿ ಶೈಕ್ಷಣಿಕ ಮಾಹಿತಿ ಮೀಸಲಾತಿ ಮಾಹಿತಿ ಸರಿಯಾಗಿ ನಮೂನೆ ಮಾಡಿರಬೇಕು. ತಪ್ಪಿದಲ್ಲಿ ಅರ್ಜಿ ಸಲ್ಲಿಸಿದ ಅವರ ಮೀಸಲಾತಿಯನ್ನು ತಿರಸ್ಕರಿಸಲಾಗುತ್ತದೆ.
- ಸಂಸ್ಥೆಯಲ್ಲಿರುವ ಕೊನೆಯ ದಿನಾಂಕದ ನಂತರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ.
- ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಫೋಟೋ ಸಿಗ್ನೇಚರ್ ಫೋಟೋ ಅಥವಾ ಅರ್ಜಿ ಶುಲ್ಕವನ್ನು ಪಾವತಿ ಮಾಡದಿದ್ದರೆ ಅಂತಹ ಅರ್ಜಿಗಳನ್ನು ಅಪೂರ್ಣ ಅರ್ಜಿಗಳೆಂದು ಪರಿಗಣಿಸಲಾಗುತ್ತದೆ.
ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳ ಗಮನಕ್ಕೆ ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಗಳ ಪ್ರಕಾರ ನೀವು ಈ ಹುದ್ದೆಗಳಿಗೆ ಇಲಿಜಿಬಲ್ ಇದ್ದರೆ ಮಾತ್ರ ಅರ್ಜಿ ಸಲ್ಲಿಸಿ. ಅಧಿಕೃತ ಅಧಿಸೂಚನೆಯನ್ನು ಓದದೆ ನೇರವಾಗಿ ಅರ್ಜಿ ಸಲ್ಲಿಸಿ ಏನಾದರೂ ಸಮಸ್ಯೆಗಳನ್ನು ಎದುರಿಸಿದರೆ ಅದಕ್ಕೆ ನಾವು ಜವಾಬ್ದಾರ ಆಗಿರುವುದಿಲ್ಲ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಅಧಿಕೃತ ದಾಖಲೆಗಳಲ್ಲಿ ಇರುವ ಹಾಗೆಯೇ ಬರ್ತಿ ಮಾಡಿ ಯಾವುದೇ ರೀತಿಯ ಹೆಸರು ವಿಳಾಸ ಮಿಸ್ ಮ್ಯಾಚ್ ಆದಲ್ಲಿ ವೆರಿಫಿಕೇಶನ್ ಸಮಯದಲ್ಲಿ ಸಮಸ್ಯೆಯನ್ನು ಎದುರಿಸಬಹುದಾಗಿದೆ ಆದ್ದರಿಂದ ಅರ್ಜಿ ಸಲ್ಲಿಸುವಾಗ ಸರಿಯಾಗಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳ ಮಾಹಿತಿಗಳು:
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದೆ.
- ಅರ್ಜಿ ಸಲ್ಲಿಸುವಿಕೆಯ ಕೊನೆಯ ದಿನಾಂಕವನ್ನು ಶೀಘ್ರದಲ್ಲೇ ಅಪ್ಡೇಟ್ ನೀಡಲಾಗುತ್ತದೆ.
- ಅರ್ಜಿ ಶುಲ್ಕದ ಕೊನೆಯ ಮಾಡುವ ಕೊನೆಯ ದಿನಾಂಕವನ್ನು ಶೀಘ್ರದಲ್ಲೇ ಅಪ್ಡೇಟ್ ನೀಡಲಾಗುತ್ತದೆ.
ಅರ್ಜಿ ಶುಲ್ಕದ ಮಾಹಿತಿಗಳು :
ಬಿ ಎಂ ಟಿ ಸಿ ಹೊಸ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಸಾಮಾನ್ಯ ಅಭ್ಯರ್ಥಿಗಳಿಗೆ ಅಂದರೆ ಪ್ರವರ್ಗ ಟು ಎ ಟು ಬಿ ತ್ರೀ ಏ ಥ್ರೀ ಬಿ ಅಭ್ಯರ್ಥಿಗಳಿಗೆ ಗರಿಷ್ಠ 750 ಗಳ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಇನ್ನು ಅರ್ಜಿ ಸಲ್ಲಿಸಲು ಬಯಸುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ ಒಂದು ಮಾಜಿ ಸೈನಿಕರು ಅಥವಾ ಸೇವೆ ಸಲ್ಲಿಸುವಾಗ ಕೊಲ್ಲಲ್ಪಟ್ಟ ಅಥವಾ ಅಂಗವಿಕಲ ಅಭ್ಯರ್ಥಿಗಳು ಅಥವಾ ಮಾಜಿ ಸೈನಿಕರ ಅವಲಂಬಿತರಿಗೆ ಗರಿಷ್ಠ 500 ರೂಪಾಯಿಗಳ ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ. ಅಭ್ಯರ್ಥಿಗಳ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
ಆಯ್ಕೆ ವಿಧಾನದ ಮಾಹಿತಿಗಳು :
- ಅಭ್ಯರ್ಥಿಗಳಿಗೆ ಮೊದಲಿಗೆ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಕನಿಷ್ಠ 30ರಷ್ಟು ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡುತ್ತಾರೆ.
- ಈ ಪರೀಕ್ಷೆಯಲ್ಲಿ ಆಯ್ಕೆ ಮಾಡಿದ ನಂತರ ಅಭ್ಯರ್ಥಿಗಳಿಗೆ ಮುಂದಿನ ಹಂತದಲ್ಲಿ ತಾವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ನೀಡಿರುವ ಎಲ್ಲಾ ದಾಖಲೆಗಳನ್ನು ವೆರಿಫಿಕೇಶನ್ ಮಾಡುತ್ತಾರೆ. ನಂತರ ಮೆರಿಟ್ ಆದರದ ಮೇಲೆ 1:5 ರ ಪ್ರಮಾಣದಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಮಾಡುತ್ತಾರೆ.
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ನೀಡಿರುವ ಯಾವುದೇ ಮಾಹಿತಿಗಳು ತಪ್ಪಿದ್ದರೆ ಅಂತಹ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
- ಆಯ್ಕೆ ಮಾಡುವಾಗ ವಿದ್ಯಾರ್ಥಿಗಳ ಶೈಕ್ಷಣಿಕ ವಿದ್ಯಾಭ್ಯಾಸದ ಶೇಕಡ 25ರಷ್ಟು ಅಂಕಗಳನ್ನು ಮತ್ತು ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಪಡೆದ ಶೇಕಡ 20ರಷ್ಟು ಅಂಕಗಳನ್ನು ಸೇರಿಸಿ ಮೀಸಲಾತಿ ನಿಯಮಗಳನ್ನುಸರ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
- ಮೆರಿಟ್ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ಹಂತದಲ್ಲಿ ತಾವು ನೀಡಿರುವ ಫಿಸಿಕಲ್ ಮಾಹಿತಿಯನ್ನು ಅಂದರೆ ಎತ್ತರ ಮಾಹಿತಿಯನ್ನು ನಿಗದಿತ ಸ್ಥಳ ಮತ್ತು ದಿನಾಂಕದಂದು ಪರಿಶೀಲನೆ ಮಾಡಲಾಗುತ್ತದೆ
- ನಂತರ ಕೊನೆ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಮಾಹಿತಿಯನ್ನು ಬಿಎಂಟಿಸಿ ಮತ್ತು ಕರ್ನಾಟಕ ಪರೀಕ್ಷಾ ಅಧಿಕಾರದ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟ ಮಾಡಲಾಗುತ್ತದೆ.
ಪ್ರಮುಖ ಸೂಚನೆಗಳು :
- ಅಭ್ಯರ್ಥಿಗಳ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ನಲ್ಲಿ ಇರುವ ಮಾಹಿತಿಯನ್ನು ಸರಿಯಾಗಿ ನೀಡಿರಬೇಕು
- ಅರ್ಜಿ ಸಲ್ಲಿಸುವಾಗ ನೀಡಿರುವ ಮೀಸಲಾತಿಯ ಅಧಿಕೃತ ಪ್ರಮಾಣ ಪತ್ರಗಳನ್ನು ವೆರಿಫಿಕೇಶನ್ ಸಮಯದಲ್ಲಿ ನೀಡಬೇಕು.
- ಅರ್ಜಿ ಸಲ್ಲಿಸುವ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ.
- ಇನ್ನು ಉಳಿದ ನಿರಾಶ್ರಿತಾ ಅಭ್ಯರ್ಥಿಗಳ, ತೃತೀಯ ಲಿಂಗ ಅಭ್ಯರ್ಥಿಗಳ, ಮಾಜಿ ಸೈನಿಕರ ಪ್ರಮಾಣ ಪತ್ರಗಳನ್ನು ನೀಡಬೇಕಾಗುತ್ತದೆ.
- ವೆರಿಫಿಕೇಶನ್ ಸಮಯದಲ್ಲಿ ಯಾವುದೇ ತಪ್ಪುಗಳನ್ನು ಕಂಡರೆ ಅಥವಾ ಸುಳ್ಳು ಮಾಹಿತಿಯನ್ನು ಕಂಡರೆ ಅಂತ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ನಮ್ಮ ಡೈಲಿ ಕನ್ನಡ ನ್ಯೂಸ್ ಚಾನೆಲ್ ನಲ್ಲಿ ನಾವು ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಅಥವಾ ಫೇಕ್ ಸುದ್ದಿಗಳನ್ನು ಪಬ್ಲಿಶ್ ಮಾಡುವುದಿಲ್ಲ. ನಮ್ಮ ವೆಬ್ಸೈಟ್ನಲ್ಲಿ ನಾವು ಅಧಿಕೃತ ಮಾಹಿತಿಯನ್ನು ಮಾತ್ರ ಪಬ್ಲಿಶ್ ಮಾಡುತ್ತೇವೆ. ನಾವು ಯಾವುದೇ ರೀತಿಯ ಜಾಬುಗಳನ್ನು ನೀಡುವುದಿಲ್ಲ. ನಮಗೂ ಸರ್ಕಾರಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ನಾವು ಕೇವಲ ಸರ್ಕಾರ ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಮಾಹಿತಿಯನ್ನು ಮಾತ್ರ ನಮಗೆ ಸೆಟ್ನಲ್ಲಿ ಪಬ್ಲಿಶ್ ಮಾಡುತ್ತೇವೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ನೋಟಿಫಿಕೇಶನ್ ಅನ್ನು ಸಂಪೂರ್ಣವಾಗಿ ಓದಿ ನಂತರವೇ ತಮ್ಮ ಅರ್ಜಿಯನ್ನು ಸಲ್ಲಿಸಿ.
ಈ ಲೇಖನ ಓದಕ್ಕಾಗಿ ಧನ್ಯವಾದಗಳು ಪ್ರತಿದಿನ ಜಾಬ್ ಅಪ್ಡೇಟ್ ಸರ್ಕಾರಿ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪನ್ನು ಜಾಯಿನ್ ಆಗಬಹುದು. ನಮ್ಮ ವೆಬ್ಸೈಟ್ನಲ್ಲಿ ಪ್ರತಿದಿನ ಇದರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ ಧನ್ಯವಾದಗಳು.
