bbmp recruitment – ಬಿಬಿಎಂಪಿ ನೇಮಕಾತಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು ಕೊನೆಯ ಅವಕಾಶ, ಇಲ್ಲಿದೆ ಸಂಪೂರ್ಣ ಮಾಹಿತಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇತ್ತೀಚಿಗೆ ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲು ತನ್ನ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿರುತ್ತದೆ. ಅಭ್ಯರ್ಥಿಗಳಿಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲ ಅವಕಾಶ ನೀಡಲಾಗಿದೆ. ಈ ಲೇಖನದಲ್ಲಿ ನಾವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಶೈಕ್ಷಣಿಕ ಅರ್ಹತೆ ವಯಸ್ಸಿನ ಮಿತಿ ಆಯ್ಕೆ ಪ್ರಕ್ರಿಯೆ ಅರ್ಜಿ ಸಲ್ಲಿಸುವ ರೀತಿಯ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡುತ್ತೇವೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೆ ಓದಿ ನೀವೇನಾದರೂ ನಮ್ಮ ಚಾನಲಿಗೆ ಮೊದಲ ಬಾರಿ ಬರುತ್ತಿದ್ದರೆ ಪ್ರತಿದಿನ ಜಾಬ್ ಅಪ್ಡೇಟ್ ಅನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ.
ಖಾಲಿ ಇರುವ ಹುದ್ದೆಗಳ ವಿವರಗಳು :
ಸಂಸ್ಥೆ ಬಿಡುಗಡೆ ಮಾಡಿರುವ ಅಧಿಕೃತ ಸೂಚನೆಯ ಪ್ರಕಾರ ಕರ್ನಾಟಕದಲ್ಲಿ ಲ್ಯಾಬೋರೇಟರಿ ಟೆಕ್ನಿಷಿಯನ್ ನರ್ಸ್ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ ಹುದ್ದೆಗಳ ಸಂಕ್ಷಿಪ್ತ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ನೋಡಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು :
ಮೆಡಿಕಲ್ ಆಫೀಸರ್ ನರ್ಸ್ ಲ್ಯಾಬೋರೇಟರಿ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯದಿಂದ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಎಂಬಿಬಿಎಸ್ ಡಿಪ್ಲೋಮೋ ಬಿಎಸ್ಸಿ ಎಲ್‌ಟಿ ಶಿಕ್ಷಣವನ್ನು ಹೊಂದಿರಬೇಕು. ಈ ಶಿಕ್ಷಣ ಹೊಂದಿರುವ ಅಭ್ಯರ್ಥಿಗಳು ಮಾತ್ರ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ವಯಸ್ಸಿನ ಮಿತಿಯ ಮಾಹಿತಿಗಳು :
ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರ ಗರಿಷ್ಠ ವಯಸ್ಸಿನ ಮಿತಿಯು 65 ವರ್ಷ ಆಗಿರಬೇಕು, ನರ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರ ಗರಿಷ್ಠ ವಯಸ್ಸಿನ ಮಿತಿ 45 ವರ್ಷ ಆಗಿದೆ. ಲ್ಯಾಬ್ರಿಟರಿ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ಗರಿಷ್ಠ ವಯಸ್ಸಿನ ಮಿತಿಯು 40 ವರ್ಷ ಆಗಿದೆ ಈ ವಯಸ್ಸಿನ ಮಿತಿಯ ಒಳಗೆ ಬರುವ ಅಭ್ಯರ್ಥಿಗಳ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆ ಮಾಹಿತಿಗಳು :
ಬಿಬಿಎಂಪಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಡುಗಡೆ ಮಾಡಿರುವ ಅಧಿಕೃತ ಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವವರಿಗೆ ಮೊದಲನೇ ಹಂತದಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಮುಂದಿನ ಕೊನೆಯ ಹಂತದಲ್ಲಿ ನೇರ ಸಂದರ್ಶನವನ್ನು ನಡೆಸಿ ಸಂಸ್ಥೆಯ ಅಧಿಕೃತ ಪ್ರಕಾರ ನೇಮಕಾತಿ ಮಾಡಲಾಗುತ್ತದೆ.
ಅಭ್ಯರ್ಥಿಗಳ ವೇತನದ ವಿವರಗಳು :
ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 47,000 ವೇತನವನ್ನು ನೀಡಲಾಗುತ್ತದೆ. ನರ್ಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 18,714 ವೇತನವನ್ನು ನೀಡಲಾಗುತ್ತದೆ. ಲ್ಯಾಬ್ರಿಟರಿ ಟೆಕ್ನಿಷಿಯನ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 18 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ.
ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಕ್ರಮಗಳು :
- ಅಭ್ಯರ್ಥಿಗಳಿಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ಇರುತ್ತದೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳು ಮೊದಲಿಗೆ ಸಂಸ್ಥೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣವಾಗಿ ಓದಬೇಕು.
- ನಂತರ ಮುಂದಿನ ಹಂತದಲ್ಲಿ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಬೇಕು ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು.
- ಪ್ರಿಂಟ್ ಔಟ್ ತೆಗೆದುಕೊಂಡ ನಂತರ ಅರ್ಜಿ ನಮೂನೆಯನ್ನು ಯಾವುದೇ ತಪ್ಪುಗಳನ್ನು ಮಾಡದೆ ಭರ್ತಿ ಮಾಡಬೇಕು. ಅಭ್ಯರ್ಥಿಗಳಿಗೆ ಅರ್ಜಿ ನಮೂನೆಯಲ್ಲಿ ತಮ್ಮ ವೈಯಕ್ತಿಕ ವಿವರಗಳು ಶೈಕ್ಷಣಿಕ ಮಾಹಿತಿ ಮುಂತಾದ ಮಾಹಿತಿಗಳನ್ನು ಭರ್ತಿ ಮಾಡಲು ಇರುತ್ತದೆ.
- ಕೊನೆಯದಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ನಂತರ ಬೇಕಾಗಿರುವಾ ಅಗತ್ಯ ದಾಖಲೆಗಳ ಜೊತೆ ಈ ಕೆಳಗೆ ನೀಡಿರುವ ವಿಳಾಸಕ್ಕೆ ಪೋಸ್ಟ್ ಮೂಲಕ ಅರ್ಜಿ ನಮೂನೆಯನ್ನು ಕಳುಹಿಸಬೇಕು.
- ಅರ್ಜಿ ನಮೂನೆಯನ್ನು ಕಳುಹಿಸಬೇಕಾದ ವಿಳಾಸ ಹೀಗಿದೆ ನೋಡಿ ಚೀಫ್ ಮೆಡಿಕಲ್ ಆಫೀಸರ್ 304,Annex 3 ಬಿಲ್ಡಿಂಗ್ ಮೂರನೇ ಫ್ಲೋರ್ ಪ್ರತ್ ಬೆಂಗಳೂರು ಮಾನಗರ ಪಾಲಿಕೆ ಮುಖ್ಯ ಕಛೇರಿ ಎನ್ ಆರ್ ಚೌಕು ಬೆಂಗಳೂರು 560002 ಈ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳ ಮಾಹಿತಿಗಳು :
ಅಭ್ಯರ್ಥಿಗಳಿಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಓಪನ್ ಆಗಿರುತ್ತದೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 30 ಆಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಈ ದಿನಾಂಕದ ಮುನ್ನ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಡೈಲಿ ಕನ್ನಡ ನ್ಯೂಸ್ ಯಾವುದೇ ರೀತಿಯ ಜಾಬ್ ಗಳನ್ನು ನೀಡುವುದಿಲ್ಲ ನಮಗೂ ಸರಕಾರಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ನಾವು ಕೇವಲ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯ ಮಾಹಿತಿಯನ್ನು ಮಾತ್ರ ನೀಡುತ್ತೇವೆ. ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸುವ ಮುನ್ನ ಸಂಸ್ಥೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರವೇ ತಮ್ಮ ಅರ್ಜಿಯನ್ನು ಸಲ್ಲಿಸಿ. ನಂತರ ಯಾವುದೇ ರೀತಿಯ ತೊಂದರೆಗಳನ್ನು ಅನುಭವಿಸಿದರೆ ಅದಕ್ಕೆ ಡೈಲಿ ಕನ್ನಡ ನ್ಯೂಸ್ ಜವಾಬ್ದರಾಗಿರುವುದಿಲ್ಲ.
ನಮ್ಮ ವೆಬ್ ಸೈಟ್ ನಲ್ಲಿ ನಾವು ಪ್ರತಿದಿನ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಪ್ರತಿದಿನ ಜಾಬ್ ಅಪ್ಡೇಟ್ಗಳನ್ನು ನೀಡುತ್ತೇವೆ. ಪ್ರತಿದಿನ ಜಾಬ್ ಅಪ್ಡೇಟ್ ಪಡೆಯಲು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪನ್ನು ಜಾಯಿನ್ ಆಗಬಹುದು. ಈ ಲೇಖನ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ ಈ ಲೇಖನಿಷ್ಠವಾಗಿದ್ದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ.
