ಕರ್ನಾಟಕ ರಾಜ್ಯದಲ್ಲಿ ವಾಹನಗಳ ಸ್ಕ್ರಾಪಿಂಗ್ ಪಾಲಿಸಿ Vehicle Scrapping Policy ಅಂತವಾಗಿ ಹಂತ ಹಂತವಾಗಿ ಜಾರಿಗೊಳಿಸಲು ನಿರ್ಧಾರ ಮಾಡಲಾಗಿದೆ. ಈಗಾಗಲೇ ಸರ್ಕಾರದಲ್ಲಿರುವ ಇಲಾಖೆಗಳ ಮತ್ತು ನಿಗಮ ಮಂಡಳಿಗಳಲ್ಲಿರುವ 15 ವರ್ಷಗಳ ಹಳೆಯ ವಾಹನಗಳನ್ನು ಸ್ಕ್ರಾಪಿಂಗ್ ಮಾಡಲು ಆದೇಶ ಮಾಡಲಾಗಿದೆ. ಯೋಜನೆಯ ಅಡಿಯಲ್ಲಿ 15 ಸಾವಿರಕ್ಕೂ ಹೆಚ್ಚಿನ ವಾಹನಗಳನ್ನು ಸ್ಕ್ರಾಪಿಂಗ್ ಮಾಡಲಾಗುತ್ತದೆ. ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದಕ್ಕೆ ಅನುಮತಿಯನ್ನು ನೀಡಿದ್ದಾರೆ. ಈ ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ್ದ ಸಚಿವ ಎಂ ಕೆ ಪಾಟೀಲ್ ಗುಜರಿ ಪಾಲಿಸಿ Vehicle Scrapping Policy ಯನ್ನು ಜಾರಿ ಮಾಡಲು ಕೇಂದ್ರ ಸರ್ಕಾರವು ನಮ್ಮ ಮೇಲೆ ಒತ್ತಡವನ್ನು ಮಾಡುತ್ತಿದೆ. ಹೀಗಾಗಿ 15 ವರ್ಷದ ಹಳೆಯ ವಾಹನಗಳನ್ನು ಹಂತ ಹಂತವಾಗಿ ನಾಶ ಮಾಡಲಾಗುವುದೆಂದು ತಿಳಿಸಿದರು.

ಒಂದು ವಾಹನ ನಾಶ ಮಾಡುವುದರಿಂದ ಸರ್ಕಾರಕ್ಕೆ 10 ಲಕ್ಷದವರೆಗೆ ನಷ್ಟ ಆಗಲಿದೆ. ಹೀಗಾಗಿ ಸರಿಸುಮಾರು 500 ಕೋಟಿ ರೂಪಾಯಿಗಳ ನಷ್ಟ ಆಗಲಿದೆ ಎಂದು ತಿಳಿಸಿದರು. ಇದರಿಂದ ಸರ್ಕಾರಕ್ಕೆ ನಷ್ಟವಾಗುತ್ತದೆ ಇದರಿಂದ ಕೇಂದ್ರ ಸರ್ಕಾರವಿದ್ದಕ್ಕೆ ಪ್ರೋತ್ಸಾಹ ಧನ ನೀಡಬೇಕು ಎಂದು ಹೇಳಿದರು. ಇದರ ಜೊತೆಗೆ ಈಗಾಗಲೇ ಚಾಲ್ತಿಯಲ್ಲಿರುವ ಮೋಟಾರ್ ವಾಹನ ಕಾಯ್ದೆಯಡಿಯಲ್ಲಿ ಎಲೆಕ್ಟ್ರಿಕ್ ಮೌಂಟೇರಿಂಗ್ ಮತ್ತು ಇನ್ಫೋಸ್ಮೆಂಟ್ ಆಫ್ ರೋಡ್ ಸೇಫ್ಟಿ ಯೋಜನೆಯಡಿಯಲ್ಲಿ 20 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿ ಮಾಡಲು ಅನುಮೋದನೆಯನ್ನು ಸರ್ಕಾರವು ನೀಡಿದೆ. ಹಲವು ಜಿಲ್ಲೆಗಳಲ್ಲಿ ಕೆಮರಾ ಸೇರಿದಂತೆ ವಿವಿಧ ಸೇಫ್ಟಿ ಯೋಜನೆಗಳನ್ನು ಜಾರಿಗೆ ಮಾಡುವುದು ಆಗಿರುತ್ತದೆ.
ಈ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು ಇಲ್ಲಿದೆ ನೋಡಿ :
- ರಾಜ್ಯದಲ್ಲಿರುವ ಕುಂಚಟ್ಟಿ ಜಾತಿಯನ್ನು ಹಿಂದುಳಿದ ವರ್ಗಗಳಿಗೆ ಸೇರಿಸಲು ಈಗಾಗಲೇ ಶಿಫಾರಸು ಮಾಡಲಾಗಿದೆ.
- ಕೊಡವ ಪದವನ್ನು ಸೇರಿಸಿದ್ದು ಕೊಡವ ಸಮಾಜದಲ್ಲಿ ಈ ಮೊದಲು ಕೊಡಗರು ಎಂದು ಪ್ರಸ್ತಾಪ ಇತ್ತು ಇದನ್ನು ಕೊಡವಾ ಎಂದು ಸರಿ ಮಾಡಲಾಗಿದೆ.
- ಮಂಗಳೂರಿನ ಮೀನುಗಾರಿಕೆ ಬಂದರಿನ ವಿಸ್ತರಣೆಯನ್ನು ಮಾಡಲು ಹೆಚ್ಚುವರಿ 69 ಕೋಟಿ ಅನುದಾನ.
- 29 ಕೋಟಿ ವೆಚ್ಚದಲ್ಲಿ ಮಂಡ್ಯ ಚಿತ್ರದುರ್ಗ ರಾಯಚೂರು ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಆಶಾಕಿರಣ ಯೋಜನೆಯಲ್ಲೇ ಉಚಿತ ಕನ್ಯ ತಪಾಸಣೆ ಮತ್ತು ಕನ್ನಡ ಕ ವಿತರಣೆ ಮಾಡುವ ಯೋಜನೆ.
- ಬೆಂಗಳೂರು ನಗರದ ಬಿಟಿಎಂ ಬಡಾವಣೆಯಲ್ಲಿ ಪ್ರಯಾಣಿಕರಿಗೆ ತಂಗುಧಾನಕ್ಕಾಗಿ 67 ಕೋಟಿ ರೂಪಾಯಿ ವೆಚ್ಚದಲ್ಲಿ ತಂಗುಧಾನದ ನಿರ್ಮಾಣ.
ಸರ್ಕಾರ ಈಗಾಗಲೇ ಮತ್ತೊಂದು ನಿರ್ಧಾರವನ್ನು ಕೈಗೊಂಡಿದ್ದು ಇನ್ನೂ ಮುಂದೆ ನೀರಾವರಿಗಾಗಿ ಯಾವುದೇ ಅಕ್ರಮ ಐಪಿ ಸೆಟ್ ಮಾಡುವುದನ್ನು ಬ್ರೇಕ್ ಮಾಡಲಾಗಿದೆ. 2018 ರಿಂದ ಇಲ್ಲಿಯವರೆಗೆ ಅಕ್ರಮವಾಗಿ ಐಪಿಎಸ್ ಸೆಟ್ ಮಾಡಿರುವುದನ್ನು ಸಕ್ರಮ ಮಾಡಲಾಗಿದೆ ಮತ್ತು ಇನ್ನು ಮುಂದಕ್ಕೆ ಇದನ್ನು ಸಕ್ರಮ ಮಾಡುವುದಿಲ್ಲ ಎಂದು ಘೋಷಣೆಯನ್ನು ಮಾಡಿದೆ. ಬೆಂಗಳೂರಿನಲ್ಲಿ ನಡೆದ ಸಂಪುಟ ಸಭೆಯ ನಂತರ ಮಾತನಾಡಿದ ಡಿಕೆ ಶಿವಕುಮಾರ್ ಮತ್ತು ಎಚ್ ಕೆ ಪಾಟೀಲ್ ಒಟ್ಟು ಕಳೆದ 8 ವರ್ಷದಲ್ಲಿ ಸರಿಸುಮಾರು 2 ಲಕ್ಷದಷ್ಟು ಅಕ್ರಮ ಪಂಪುಗಳನ್ನು ಸಕ್ರಮ ಈಗಾಗಲೇ ಮಾಡಲಾಗಿದೆ. ಇದಕ್ಕಾಗಿ ಈಗಾಗಲೇ ಎಸ್ಕಾಂ ಗಳು 7,000 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿರುತ್ತದೆ. ಇದರಿಂದಾಗಿ ರೈತರಿಗೆ ಅನುಕೂಲವಾಗಿದೆ ಇದರ ಕಟ್ ಆಫ್ ಡೇಟ್ ಸೆಪ್ಟೆಂಬರ್ 22 ಆಗಿರುತ್ತದೆ.
ರೈತರಿಗೆ ಸರ್ಕಾರವು ಮತ್ತೊಂದು ಸಂತಸದ ಸುದ್ದಿಯನ್ನು ನೀಡಿದೆ ರೈತರು ಸೌರ ಶಕ್ತಿ ಚಾಲೀತ ನೀರಾವರಿಗಳನ್ನು ಅಳವಿಡಿಸಿದರೆ ಅಂತ ರೈತರಿಗೆ ಸರ್ಕಾರವು ಪ್ರೋತ್ಸಾಹವನ್ನು ನೀಡಲು ನಿರ್ಧಾರ ಮಾಡಿದೆ. ರೈತರು ಸೌರ ಚಾಲಿತ ನೀರಾವರಿ ಪಂಪ್ಸೆಟ್ಟುಗಳನ್ನು ಅಳವಡಿಸಿದರೆ ಕೇಂದ್ರ ಸರ್ಕಾರದ ಪಿಎಂ ಯೋಜನೆಯಡಿಯಲ್ಲಿ ರೈತರಿಗೆ ಇದರ ಲಾಭ ಸಿಗುತ್ತದೆ. ಈ ಯೋಜನೆ ಅಡಿಯಲ್ಲಿ ರೈತರಿಗೆ 50% ತಾವು ಹಾಕಿದ ಬಂಡವಾಳದ ಹಣವನ್ನು ಸರ್ಕಾರವು ನೀಡುತ್ತದೆ, 20 ಶೇಕಡದಷ್ಟು ಬರ್ತಿಯನ್ನು ರೈತರು ವರಿಸಬೇಕಾಗುತ್ತದೆ ಮತ್ತು ಉಳಿದ 30 ಶೇಕಡದಷ್ಟು ಬರ್ತಿಯನ್ನು ಕೇಂದ್ರ ಸರ್ಕಾರ ತುಂಬಿ ಕೊಡಲಿದೆ ಎಂದು ಡಿಕೆ ಶಿವಕುಮಾರ್ ಅವರು ಸಭೆಯ ನಂತರ ಮಾಧ್ಯಮದವರಿಗೆ ತಿಳಿಸಿದರು. ಆಸಕ್ತಿ ಇರುವ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಇದರ ಲಾಭವನ್ನು ಪಡೆಯಲು ಬಯಸುವ ರೈತರು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.
ನಿನ್ನ ನಡೆದ ಸಂಪುಟ ಸಭೆಯ ನಂತರ ಸರ್ಕಾರವು ರಾಜ್ಯದಲ್ಲಿ ಹಲವಾರು ಯೋಜನೆಗಳಿಗೆ ಅನುಮೋದನೆಯನ್ನು ನೀಡಿದೆ ಮತ್ತು ಹಲವಾರು ಮಾತ್ರ ಘೋಷಣೆಗಳನ್ನು ಮಾಡಿದೆ. ಈ ಲೇಖನ ಓದಿದ್ದಕ್ಕಾಗಿ ಧನ್ಯವಾದಗಳು ಪ್ರತಿದಿನ ರಾಜ್ಯ ಕೇಂದ್ರ ಅಂತರಾಷ್ಟ್ರೀಯ ಸುದ್ದಿಗಳನ್ನು ಪಡೆಯಲು ಪ್ರತಿದಿನ ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಲೇಖನ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು.
Ban rice export – ಕುಚಲಕ್ಕಿ ರಸ್ತೆನ ಮೇಲೆ ಶೇಕಡ 20ರಷ್ಟು ಟ್ಯಾಕ್ಸ್ ಧರಿಸಿ ವಿಧಿಸಿದ ಸರ್ಕಾರ
