Brics meeting – ದಕ್ಷಿಣ ಆಫ್ರಿಕಕ್ಕೆ ತೆರಳಿದ ಪ್ರಧಾನಿ ಮೋದಿ
Brics meeting – ದಕ್ಷಿಣ ಆಫ್ರಿಕಕ್ಕೆ ತೆರಳಿದ ಪ್ರಧಾನಿ ಮೋದಿ – ಈ ವಾರದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ 15ನೇ ಬ್ರಿಕ್ಸ್ ಸಂಘ ಸಭೆಯಲ್ಲಿ ಭಾಗವಹಿಸಲು ನರೇಂದ್ರ ಮೋದಿಯವರು ಮಂಗಳವಾರ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಹೋಗಿದ್ದಾರೆ. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಅವರ ವಿಶೇಷ ಆಹ್ವಾನದ ಮೇರೆಗೆ ಈ ಸಭೆಗೆ ಭಾಗವಹಿಸಲು ನರೇಂದ್ರ ಮೋದಿಯವರು ಮಂಗಳವಾರ ದಕ್ಷಿಣ ಆಫ್ರಿಕಾ ಗೆ ತೆರಳಿದ್ದಾರೆ. ಈ ಬ್ರಿಕ್ಸ್ ಸಂಘವು ಒಟ್ಟು ಐದು ದೇಶಗಳನ್ನು ಒಳಗೊಂಡಿದ್ದು, ಅವುಗಳೆಂದರೆ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಆಗಿದೆ. ಈ ಬ್ರಿಕ್ಸ್ ಸಂಘ ಸಭೆಯ ಈ ವರ್ಷದ ಸಭೆಯು ಆಗಸ್ಟ್ 22 ರಿಂದ 24ರ ವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ಈ ಪ್ರವಾಸ ವು ನರೇಂದ್ರ ಮೋದಿ ಅವರ ಆಫ್ರಿಕಾದ ಮೂರನೇ ಪ್ರವಾಸವಾಗಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ನಡುವಿನ ಸಂಬಂಧವು ಬಹಳ ಹಳೆಯದು ಆಗಿದೆ. ಈ ಸಂಬಂಧಕ್ಕೆ ಈಗ 30ನೇ ವಾರ್ಷಿಕೋತ್ಸವದ ಸಮಯವಾಗಿದೆ ಹಾಗಾಗಿ ಈ ಸಭೆಯು ವಿಶೇಷವಾಗಿದೆ. ಈ ವರ್ಷದ ಬ್ರಿಕ್ಸ್ ಸಭೆಯ Brics meeting ಅಧ್ಯಕ್ಷರು ಕೂಡ ಆಫ್ರಿಕಾದ ಅಧ್ಯಕ್ಷರೇ ಆಗಿದ್ದಾರೆ. ಹೀಗಾಗಿ ಈ ಸಭೆಯಲ್ಲಿ ಮಹತ್ತರವಾದ ಬೆಳವಣಿಗೆಗಳು ಕಂಡುಬರುವ ಸಾಧ್ಯತೆಗಳಿವೆ.
Brics meeting – ದಕ್ಷಿಣ ಆಫ್ರಿಕಕ್ಕೆ ತೆರಳಿದ ಪ್ರಧಾನಿ ಮೋದಿ
Brics meeting – ದಕ್ಷಿಣ ಆಫ್ರಿಕಕ್ಕೆ ತೆರಳಿದ ಪ್ರಧಾನಿ ಮೋದಿ ಈ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ವಿಷಯಗಳ ಕುರಿತು ಚರ್ಚೆ ಮಾಡಲಿದ್ದಾರೆ. ವಿಶೇಷವಾಗಿ ವಾಣಿಜ್ಯೋದ್ಯಮ, ವ್ಯಾಪಾರ ಮಂಡಳಿ, ಮಹಿಳಾ ವ್ಯಾಪಾರ ಒಕ್ಕೂಟ ಮುಂತಾದ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಈ ಸಭೆಗೆ ರಷ್ಯಾದ ಅಧ್ಯಕ್ಷ ಪುಟಿನ್ ಆನ್ಲೈನ್ ಮೂಲಕ Brics meeting ಭಾಗವಹಿಸಲಿದ್ದಾರೆ. ಉಳಿದ ದೇಶಗಳ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಈ ಸಭೆಯಲ್ಲಿ ದಕ್ಷಿಣ ಆಫ್ರಿಕದಲ್ಲಿ ಭೇಟಿಯಾಗಲಿದ್ದಾರೆ. ಆದರೆ ರಷ್ಯಾದ ಅಧ್ಯಕ್ಷ ಪುಟಿನ್ ಅವರು ಆನ್ಲೈನ್ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾರೆ. ರಷ್ಯಾ ಯುಕ್ರೇನ್ ಯುದ್ಧದ ನಂತರ ರಷ್ಯಾ ಅಧ್ಯಕ್ಷರ ವಿರುದ್ಧ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಹಲವಾರು ಕೇಸುಗಳು ದಾಖಲಾಗಿದೆ ಇದರಿಂದಾಗಿ ಅವರು ಆನ್ಲೈನ್ ಮೂಲಕ ಸಭೆಯನ್ನು ಭಾಗವಹಿಸಲಿದ್ದಾರೆ.

ಈ ಬ್ರಿಕ್ಸ್ ಶೃಂಗಸಭೆಯನ್ನು ಮುಗಿಸಿಕೊಂಡು ಮೋದಿ ಅವರು ನಂತರ ಆಗಸ್ಟ್ 25ರನ್ನು ಗ್ರೀಸ್ ದೇಶಕ್ಕೆ ಪ್ರವಾಸ ಮಾಡುತ್ತಾರೆ. ಗ್ರೀಸ್ ದೇಶದ ಪ್ರಧಾನಿಯು ವಿಶೇಷ ಅಹ್ವಾನ ಭಾರತದ ಪ್ರಧಾನ ಮಂತ್ರಿಗಳಿಗೆ ನೀಡಿದ್ದಾರೆ. ಹೀಗಾಗಿ ಭಾರತದ ಪ್ರಧಾನಿ ಒಬ್ಬರು ಈ ದೇಶಕ್ಕೆ ಹಲವಾರು ವರ್ಷಗಳ ನಂತರ ಭೇಟಿ ನೀಡುವುದಾಗಿದೆ. ಈ ಭೇಟಿಯು ಎರಡು ದೇಶಗಳ ನಡುವಿನ ಸಂಬಂಧವನ್ನು ಇನ್ನೂ ಹೆಚ್ಚು ಬಲಪಡಿಸುತ್ತದೆ. ಈ ಪ್ರವಾಸದಲ್ಲಿ ಹಲವಾರು ವಿಷಯಗಳ ಕುರಿತು ಎರಡು ದೇಶಗಳು ಕೂಡ ಚರ್ಚೆ ಮಾಡಲಿದೆ. ಭಾರತವು ಈ ವರ್ಷದಲ್ಲಿ ಜಿ 20 ಯ ಅಧ್ಯಕ್ಷತೆಯನ್ನು ವಹಿಸಿದ್ದು ಇದೇ ವರ್ಷ ಇದರ ಸಭೆಯು ಭಾರತದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ವಿಶ್ವದ 20 ದೇಶಗಳ ನಾಯಕರು ಇರಲಿದ್ದಾರೆ.
Chandraya 3 – ನಾಳೆ ನಡೆಯುವ ಲ್ಯಾಂಡಿಂಗ್ ಪ್ರಕ್ರಿಯೆ ಹೇಗಿರಲಿದೆ ?
ಈಗಾಗಲೇ g20 ಹಲವಾರು ಸಭೆಗಳು ಭಾರತದಲ್ಲಿ ನಡೆಯುತ್ತಿದ್ದು ಇದರ ಮುಖ್ಯ ಸಭೆಯು ಈ ವರ್ಷದ ಕೊನೆಯಲ್ಲಿ ದೆಹಲಿಯಲ್ಲಿ ನಡೆಯಲಿದೆ ಈ ಸಭೆಯಲ್ಲಿ ವಿಶ್ವದ ಪ್ರಮುಖ ದೇಶಗಳ ನಾಯಕರು ಭಾಗವಿಸಲಿದ್ದಾರೆ. ಇದು ಈ ವರ್ಷದ ಅತ್ಯಂತ ಪ್ರಮುಖ ಸಭೆಗಳಲ್ಲಿ ಒಂದಾಗಿದೆ ಈ ಸಭೆಯು ಈಗಾಗಲೇ ಕಾಶ್ಮೀರ ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ನಡೆಯುತ್ತಿದೆ ಬೆಂಗಳೂರಿನಲ್ಲಿ ಕೂಡ ಇದರ ಸವೆಯುವ ನಡೆದಿದೆ.
