ನಮಸ್ಕಾರ ಸ್ನೇಹಿತರೆ ದಿಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗೆ ಐಟಿಐ ಮತ್ತು ಡಿಪ್ಲೋಮೋ ಪಾಸಾದವರಿಗೆ ಅರ್ಜಿಯನ್ನು ಸಲ್ಲಿಸಲು ಹೊಸ ನೋಟಿಫಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಸ್ಥಳೀಯ ವೃಂದ ಅಡಿಯಲ್ಲಿ ನೇರ ನೇಮಕಾತಿಯನ್ನು ಮಾಡಲು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಸಂಸ್ಥೆಯಾ ಅಧಿಕೃತ ಅಧಿಸೂಚನೆಯ ಪ್ರಕಾರ ಕೊನೆಯ ದಿನಾಂಕವನ್ನು ಮುಂದೂಡಲಾಗಿದೆ. ಅಭ್ಯರ್ಥಿಗಳಿಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇನ್ನೂ ಅವಕಾಶ ಇರುತ್ತದೆ. ಈ ಲೇಖನದಲ್ಲಿ ನಾವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ, ಅರ್ಜಿ ಸಲ್ಲಿಸುವ ರೀತಿ ವೇತನದ ಮಾಹಿತಿ, ಹುದ್ದೆಗಳ ಮಾಹಿತಿ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೆ ಓದಿ.
ಹುದ್ದೆಗಳ ವಿವರಗಳು – Job details:
1. ಸಹಾಯಕ ಪೋರೈನ್ ಗಣಿ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಡಿಪ್ಲೋಮೋ ಮೈನಿಂಗ್ ಶಿಕ್ಷಣವನ್ನು ಹೊಂದಿರಬೇಕು. ಒಟ್ಟು 15 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.
2. ಸಹಾಯಕ ಪೋರೈನ್ :
ಈ ಮೇಲೆ ನೀಡಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಬಯಸುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯದಿಂದ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಮೂರು ವರ್ಷಗಳ ಡಿಪ್ಲೋಮಾ ಪದವಿಯನ್ನು ಮೆಟಲರ್ಜಿ ವಿಷಯದಲ್ಲಿ ಪಡೆದಿರಬೇಕು. ಈ ಶಿಕ್ಷಣ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಪಡೆಯುತ್ತಾರೆ. ಒಟ್ಟು ಐದು ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ.
3. ಸಹಾಯಕ ಪೋರೈನ್ ಸಿವಿಲ್ :
ಸಹಾಯಕ ಸಿವಿಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಮೂರು ವರ್ಷಗಳ ಡಿಪ್ಲೋಮೋ ಸಿವಿಲ್ ಪದವಿಯನ್ನು ಪಡೆದಿರಬೇಕು. ಈ ಹುದ್ದೆಗಳಿಗೆ ಕೇವಲ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲ ಅವಕಾಶ ನೀಡಲಾಗಿದೆ. ಒಟ್ಟು ಒಂದು ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ಕೆಟಗರಿ ಟು ಕೆಟಗರಿ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲಾವಕಾಶವಿರುತ್ತದೆ.
4. ಸಹಾಯಕ ಪೋರೈನ್ ಭೂಗರ್ಭ ಶಾಸ್ತ್ರ :
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯದಿಂದ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಒಟ್ಟು ಮೂರು ವರ್ಷಗಳ ಬಿ ಎಸ್ಸಿ ಭೂಗರ್ಭ ಶಾಸ್ತ್ರ ಪದವಿಯನ್ನು ಪಡೆದಿರಬೇಕು. ಈ ಹುದ್ದೆಗಳಿಗೆ ಗ್ರಾಮೀಣ ಅಭ್ಯರ್ಥಿಗಳಿಗೆ ಮತ್ತು ಮಾಜಿ ಸೈನಿಕರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಒಟ್ಟು ಎರಡು ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಕೆಟಗರಿ 2a ಮತ್ತು ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲ ಅವಕಾಶ ಇದೆ.
5. ಸಹಾಯಕ ಪೋರೈನ್ ಡೈಮಂಡ್ ಡ್ರಿಲ್ಲಿಂಗ್
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯದಿಂದ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಒಟ್ಟು ಮೂರು ವರ್ಷಗಳ ಡಿಪ್ಲೋಮೋ ಡ್ರಿಲ್ಲಿಂಗ್ ಟೆಕ್ನಾಲಜಿ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು. ಒಟ್ಟು ಹುದ್ದೆಗಳ ಸಂಖ್ಯೆ ಒಂದು ಆಗಿದೆ. ಗ್ರಾಮೀಣ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಕೆಟಗರಿ 3 A ಅಭ್ಯರ್ಥಿಗಳಿಗೆ ಅವಕಾಶ ಇರುತ್ತದೆ.
6. ಸಹಾಯಕ ಪೋರೈನ್ ಎಲೆಕ್ಟ್ರಿಕ್
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಮೂರು ವರ್ಷಗಳ ಡಿಪ್ಲೋಮೋ ಎಲೆಕ್ಟ್ರಿಕ್ ಪದವಿಯನ್ನು ಪಡೆದಿರಬೇಕು. ಈ ಶಿಕ್ಷಣ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲಾವಕಾಶ ಇರುತ್ತದೆ. ಮಾಜಿ ಸೈನಿಕ ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಒಟ್ಟು ಹುದ್ದೆಗಳ ಸಂಖ್ಯೆ ಒಂದು ಆಗಿದೆ.
7. ಸಹಾಯಕ ಪೋರೈನ್ ಮೆಕಾನಿಕ್
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಕಾನಿಕ್ ಡಿಪ್ಲೋಮಾ ಇಂಜಿನಿಯರಿಂಗ್ ನಲ್ಲಿ ಪದವಿಯನ್ನು ಪಡೆದಿರಬೇಕು. ಒಟ್ಟು 16 ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತದೆ. ಅಭ್ಯರ್ಥಿಗಳ ಜಾತಿ ಅನುಸಾರ ಪೋಸ್ಟ್ಗಳು ಇರುತ್ತದೆ. ಹುದ್ದೆಗಳ ಹೆಚ್ಚಿನ ಮಾಹಿತಿಯನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ನೋಡಬಹುದು.
8. ಭದ್ರತಾ ನಿರೀಕ್ಷಕರು
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣವನ್ನು ಪಡೆದಿರಬೇಕು ಅಥವಾ ಮಾಜಿ ಸೈನಿಕರು ಆಗಿರಬೇಕು. ಒಟ್ಟು ಆರು ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತದೆ. ಗ್ರಾಮೀಣ ಮಹಿಳಾ ಮಾಜಿ ಸೈನಿಕ ಮತ್ತು ತೃತೀಯಲಿಂಗ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
ಅರ್ಜಿ ಶುಲ್ಕ ಮಾಹಿತಿಗಳು – Fess details :
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ ಒಂದು ಅಭ್ಯರ್ಥಿಗಳಿಗೆ ನೂರು ರೂಪಾಯಿಗಳ ಅರ್ಜಿ ಶುಲ್ಕ ಇರುತ್ತದೆ. ಇದರ ಜೊತೆ ಮಾಜಿ ಸೈನಿಕ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೂ ನೂರು ರೂಪಾಯಿಗಳ ಅರ್ಜಿ ಶುಲ್ಕ ಇರುತ್ತದೆ. ಹಿಂದುಳಿದ ವರ್ಗಗಳಾದ ಕೆಟಗರಿ ಟು ಎ ಟು ಬಿ ತ್ರೀ ಏ ಥ್ರೀ ಬಿ ಅಭ್ಯರ್ಥಿಗಳಿಗೆ ಗರಿಷ್ಠ 300 ರೂಪಾಯಿಗಳ ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ. ಇನ್ನು ಸಾಮಾನ್ಯ ಅಭ್ಯರ್ಥಿಗಳಿಗೆ 600 ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳ ಮಾಹಿತಿಗಳು – Application last Date :
ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಅವಕಾಶ ನೀಡಲಾಗಿದೆ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಮೊದಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮೇ 3ರಂದು ನೀಡಲಾಗಿತ್ತು ಆದರೆ ಈ ದಿನಾಂಕವನ್ನು ಮೇ 30ರವರೆಗೆ ವಿಸ್ತರಣೆ ಮಾಡಲಾಗಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ರೀತಿ – How to apply online :
- ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ ಸೈಟ್ ಗ ಭೇಟಿ ನೀಡಿ ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಮತ್ತು ಎಜುಕೇಶನ್ ಜಾತಿ ಮುಂತಾದ ಎಲ್ಲಾ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು.
- ನಂತರ ಮೊಬೈಲ್ ನಂಬರ್ ಇಮೇಲ್ ಐಡಿ ವೆರಿಫಿಕೇಶನ್ ಮಾಡಬೇಕು.
- ನಂತರ ಅಗತ್ಯ ಇರುವ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಅರ್ಜಿ ನಮೂನೆಯನ್ನು ಸಬ್ಮಿಟ್ ಮಾಡಬೇಕು.
ಪ್ರಮುಖ ಸೂಚನೆಗಳು :
ಡೈಲಿ ಕನ್ನಡ ನ್ಯೂಸ್ ಯಾವುದೇ ರೀತಿಯ ಡೈರೆಕ್ಟ್ ಜಾಬ್ ಗಳನ್ನು ನೀಡುವುದಿಲ್ಲ. ನಾವು ಕೇವಲ ಸರ್ಕಾರ ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಮಾಹಿತಿಯನ್ನು ಮಾತ್ರ ನಮಗೆ ಮಾಡುತ್ತೇವೆ. ನಮಗೂ ಸರ್ಕಾರಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ನಾವು ಕೇವಲ ಇತ್ತೀಚೆಗೆ ಬಿಡುಗಡೆಯಾಗಿರುವ ನೋಟಿಫಿಕೇಶನ ಮಾಹಿತಿಯನ್ನು ಮಾತ್ರ ನಮಗೆ ವೆಬ್ಸೈಟ್ ನಲ್ಲಿ ಪಬ್ಲಿಶ್ ಮಾಡುತ್ತೇವೆ. ನಮ್ಮ ವೆಬ್ಸೈಟ್ನಲ್ಲಿ ನಾವು ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಸುದ್ದಿಗಳನ್ನು ಪಬ್ಲಿಶ್ ಮಾಡುವುದಿಲ್ಲ. ನಾವು ಕೇವಲ ನಿಖರವಾದ ಮಾಹಿತಿಗಳನ್ನು ಮಾತ್ರ ನಮ್ಮ ವೆಬ್ಸೈಟ್ನಲ್ಲಿ ಪಬ್ಲಿಶ್ ಮಾಡುತ್ತೇವೆ.
ಈ ಲೇಖನದಲ್ಲಿ ನಾವು ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಹಟ್ಟಿಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ಬಿಡುಗಡೆ ಮಾಡಿರುವ ಇತ್ತೀಚಿನ ಹೊಸ ಅಧಿಕೃತ ಅಧಿಸೂಚನೆಯ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಮಾಹಿತಿ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಈ ಲೇಖನವನ್ನು ಹಂಚಿಕೊಳ್ಳಿ. ನಮ್ಮ ವೆಬ್ಸೈಟ್ನಲ್ಲಿ ನಾವು ಪ್ರತಿದಿನ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಪ್ರತಿದಿನ ಜಾಬ್ ಅಪ್ಡೇಟ್ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು
News sourse official website : https://huttigoldkarnataka.co.in/
