Breaking News – ಫೇಕ್ ಸುದ್ದಿ ಹಾಕಿದರೆ ಜೈಲ್ ಶಿಕ್ಷೆ ಖಚಿತ ಎಚ್ಚರವಾಗಿರಿ
Breaking News – ಫೇಕ್ ಸುದ್ದಿ ಹಾಕಿದರೆ ಜೈಲ್ ಶಿಕ್ಷೆ ಖಚಿತ ಎಚ್ಚರವಾಗಿರಿ – ರಾಜ್ಯದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿದರೆ ಇನ್ನು ಮುಂದೆ ಕೇಸ್ ಆಗುವುದು ಖಚಿತ. ಏಕೆಂದರೆ ರಾಜ್ಯದಲ್ಲಿ ಸುಳ್ಳು ಸುದ್ದಿಯನ್ನು ಹರಡದಂತೆ ಮಾಡಲು ರಾಜ್ಯ ಸರ್ಕಾರವು ಫ್ಯಾಕ್ಟ್ ಘಟಕವನ್ನು ಸ್ಥಾಪನೆ ಮಾಡಲು ಮುಂದಾಗಿದೆ. ರಾಜ್ಯದಲ್ಲಿ ಸುಳ್ಳು ಸುದ್ದಿಯಿಂದ ಆಗುವ ಪರಿಣಾಮವನ್ನು ಕಡಿಮೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಈ ಘಟಕವನ್ನು ಪ್ರಾರಂಭ ಮಾಡಲು ಚಿಂತನೆಯನ್ನು ಮಾಡಿದ್ದಾರೆ. ಈಗಾಗಲೇ ಇದ್ದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದರ ಕುರಿತು ಕೃಷ್ಣದಲ್ಲಿರುವ ಗೃಹ ಕಚೇರಿಯಲ್ಲಿ ಸೋಮವಾರ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಇದರ ಬಗ್ಗೆ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.
ರಾಜ್ಯದಲ್ಲಿ ಫ್ಯಾಕ್ಟ್ ಚೆಕ್ ಘಟಕಗಳ ಸ್ಥಾಪನೆ :
ಈ ಘಟಕದಲ್ಲಿ ನೋಡಲಾಧಿಕಾರಿಗಳ ನೇಮಕ ಸೇರಿದಂತೆ ಸತ್ಯ ತಪಾಸನೆ ತಂಡ ಮತ್ತು ಇತರ ತಂಡಗಳನ್ನು ಒಳಗೊಂಡಿರುತ್ತದೆ. ಈ ತಂಡದ ಮೂಲಕ ಸುಳ್ಳು ಸುದ್ದಿಯನ್ನು ಹಬ್ಬುವ ಜನರನ್ನು ಪತ್ತೆ ಮಾಡುವುದರ ಉದ್ದೇಶವಾಗಿದೆ. ಇದರ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆಯವರು ರಾಜ್ಯದಲ್ಲಿ ಫ್ಯಾಕ್ಟ್ ಘಟಕ ಅನಿವಾರ್ಯವಾಗಿದೆ. ಎಐ ತಂತ್ರಜ್ಞಾನದ ಮೂಲಕ ಫೇಕ್ ಸುದ್ದಿಗಳು ಹರಳುತ್ತಿದೆ. ಇದನ್ನು ತಡೆಗಟ್ಟಲು ಇದು ಸಹಾಯಕವಾಗಲಿದೆ ಎಂದು ತಿಳಿಸಿದರು. ಈ ಘಟಕಗಳಿಂದ ಸುಳ್ಳು ಸುದ್ದಿಗಳನ್ನು ಗುರುತಿಸುವುದು ಕಾನೂನಿನ ಸ್ಯುವ್ಯವಸ್ತೆಗಳನ್ನು ಕಾಪಾಡಲು ಇದು ಅತ್ಯಗತ್ಯವಾಗಿದೆ. ಈ ಘಟಕಕ್ಕೆ ನಮಗೆ ಸಹಕರಿಸುತ್ತದೆ ಎಂದು ಸಚಿವ ಪ್ರಿಯಾಂಕ ಖರ್ಗೆಯವರು ತಿಳಿಸಿದರು.
Brics meeting – ದಕ್ಷಿಣ ಆಫ್ರಿಕಕ್ಕೆ ತೆರಳಿದ ಪ್ರಧಾನಿ ಮೋದಿ
Breaking News – ಫೇಕ್ ಸುದ್ದಿ ಹಾಕಿದರೆ ಜೈಲ್ ಶಿಕ್ಷೆ ಖಚಿತ ಎಚ್ಚರವಾಗಿರಿ ಇನ್ನು ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು ಈ ಘಟಕ ಸ್ಥಾಪನೆ ಮಾಡುವುದರಿಂದ ಸಮಾಜದಲ್ಲಿ ಎರಡು ಸುದ್ದಿಗಳನ್ನು ನಿಯಂತ್ರಣ ಮಾಡಿ ಇಂತಹ ಸುದ್ದಿಗಳನ್ನು ಹಬ್ಬಿಸುವವರಿಗೆ ಶಿಕ್ಷೆಯ ಅಪರಾಧವನ್ನು ನೀಡುವುದು ಮತ್ತು ಜನರಿಗೆ ಇದರ ಬಗ್ಗೆ ಮನವರಿಕೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಇವರ ಜೊತೆಗೆ ರಾಜಕೀಯ ಕಾರ್ಯದರ್ಶಿ, ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಹೇಮಂತ್ ಅವರು ಭಾಗಿಯಾಗಿದ್ದರು.
Breaking News – ಫೇಕ್ ಸುದ್ದಿ ಹಾಕಿದರೆ ಜೈಲ್ ಶಿಕ್ಷೆ ಖಚಿತ ಎಚ್ಚರವಾಗಿರಿ
2016ರ ನಂತರ ತಂತ್ರಜ್ಞಾನದಲ್ಲಿ ಆದ ಬೆಳವಣಿಗೆಯಿಂದ ಭಾರತದಲ್ಲಿ ಡೇಟಾ ದರದಲ್ಲಿ ಇಳಿಕೆಯಾದ ಕಾರಣ ಡೇಟಾ ಬಳಕೆ ಮಾಡುವವರ ಅವರ ಸಂಖ್ಯೆ ಹೆಚ್ಚಾಗಿದ. ಈ ಸಮಯದಲ್ಲಿ ಆನ್ಲೈನ್ನಲ್ಲಿ ಬರುವ ಸುದ್ದಿಗಳ ಪೈಕಿ ಯಾವ ಸುದ್ದಿಗಳು ನಿಜ, ಯಾವ ಸುದ್ದಿಗಳು ಪತ್ತೆ ಮಾಡುವುದು ಕಷ್ಟಕರವಾಗಿದೆ. ಸೋಶಿಯಲ್ ಮೀಡಿಯಾ ಮತ್ತು ವೆಬ್ಸೈಟ್ ಗಳಲ್ಲಿ ಪ್ರಕಟವಾಗುತ್ತಿದೆ. ಫೇಕ್ ಸುದ್ದಿಗಳ ಹರಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರಗಳು ಈ ಕ್ರಮವನ್ನು ಕೈಗೊಂಡಿದೆ ಇದರಿಂದ ಫೇಕ್ ಸುದ್ದಿ ಹರಡಿಸುವ ವ್ಯಕ್ತಿಗಳಿಗೆ ಕಾನೂನಿನ ಮೂಲಕ ಶಿಕ್ಷೆಯಾಗುತ್ತದೆ.
